ಯಲ್ಲಾಪುರ ಪೊಲೀಸ್ರ ಸಿನಿಮಿಯ ರೀತಿ ದಾಳಿ..!! ಉಮ್ಮಚಗಿ ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ನಟೋರಿಯಸ್ ಕಳ್ಳನ ಗ್ಯಾಂಗ್ ಅಂದರ್..!

Yellapur police News;
ಯಲ್ಲಾಪುರ ಪೊಲೀಸ್ರು ಭರ್ಜರಿ ಕಾರ್ಯ ಮಾಡಿದ್ದಾರೆ. ಕಳೆದ ಬುಧವಾರ ಅಂದ್ರೆ ನವೆಂಬರ್ 12 ರಂದು ಉಮ್ಮಚಗಿಯಲ್ಲಿ ನಡೆದಿದ್ದ ದರೋಡೆ ಯತ್ನ ಕೇಸನ್ನು ರೋಚಕವಾಗಿ, ಅಷ್ಟೇ ಭಯಂಕರವಾಗಿ ಬೇಧಿಸಿದ್ದಾರೆ. ಥೇಟು ಸಿನಿಮಾ ಸ್ಟೈಲಿನಲ್ಲೇ ಕಾರ್ಯಾಚರಣೆ ನಡೆಸಿರೋ ಯಲ್ಲಾಪುರ ಪೊಲೀಸ್ರಿಗೆ, ಬೆಳಗಾವಿ ಶಹಾಪುರದ ಖಾಸಭಾಗದಲ್ಲಿ ಭಯಾನಕ ದರೋಡೆಕೋರ ಬಲೆಗೆ ಬಿದ್ದಿದ್ದಾನೆ. ಅದ್ರೊಂದಿಗೆ ಇಡೀ ಕರ್ನಾಟಕದ ಪೊಲೀಸ್ರಿಗೆ ಕಳೆದ ಒಂದೂವರೇ ವರ್ಷದಿಂದ ಮೋಸ್ಟ್ ವಾಂಟೇಡ್ ಲಿಸ್ಟ್ ನಲ್ಲಿ ಇದ್ದವನು ಕೊನೆಗೂ ಅಂದರ್ ಆಗಿದ್ದಾನೆ.

ಉಮ್ಮಚಗಿಯಲ್ಲಿ..!
ಯಲ್ಲಾಪುರದ ಉಮ್ಮಚಗಿಯಲ್ಲಿ KVG ಬ್ಯಾಂಕ್ ದರೋಡೆಗೆ ವಿಫಲ ಯತ್ನ ಮಾಡಿ, ಬೆಳಗಾವಿಯಲ್ಲಿ ಅಡಗಿ ಕುಳಿತಿತ್ತು ಅದೊಂದು ನಟೋರಿಯಸ್ ಗ್ಯಾಂಗ್.. ಆ ಗ್ಯಾಂಗ್ ನ ಬೆನ್ನತ್ತಿದ್ದ ಯಲ್ಲಾಪುರ ಪೊಲೀಸ್ರು ಸೋಮವಾರ ಚಾಣಾಕ್ಷತನದಿಂದಲೇ ಗ್ಯಾಂಗಿಗೆ ಬಲೆ ಬೀಸ್ತಾರೆ. ಬೆಳಗಾವಿ ಶಹಾಪುರದ ಖಾಸಭಾಗದಲ್ಲಿ ಟೆಂಟು ಹಾಕೊಂಡು ಮತ್ತೊಂದು ಭಯಾನಕ ಕೃತ್ಯಗಳಿಗೆ ಸ್ಕೆಚ್ ಹಾಕ್ತಿದ್ದ ಆ ಗ್ಯಾಂಗ್ ಮೇಲೆ ದಾಳಿ ಮಾಡ್ತಾರೆ. ಅಷ್ಟೊತ್ತಿಗಾಗಲೇ ಪೊಲೀಸ್ರ ದಾಳಿಯ ಖಚಿತತೆ ಸಿಕ್ಕ ಕೂಡಲೇ, ಆ ಗ್ಯಾಂಗ್ ಸಿನಿಮಿಯ ರೀತಿಯಲ್ಲಿ ಎಸ್ಕೇಪ್ ಆಗೋಕೆ ಟ್ರೈ ಮಾಡಿರತ್ತೆ. ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸತ್ತೆ. ಹೀಗಾಗಿ, ಹೇಗಾದ್ರೂ ಸರಿ ಆಗಂತುಕರ ಹೆಡೆಮುರಿ ಕಟ್ಟಲೇ ಬೇಕು ಅಂತಾ ಜಿದ್ದಿಗೆ ಬಿದ್ದ ಯಲ್ಲಾಪುರದ ಖಡಕ್ ಪೊಲೀಸ್ ಟೀಂ, ತಮ್ಮ‌ಜೀವಗಳನ್ನೇ ಒತ್ತೆ ಇಟ್ಟು ಆ ನಟೋರಿಯಸ್ ದರೋಡೆಕೋರ ಗುಂಪನ್ನು ಹೆಡೆಮುರಿ ಕಟ್ಟತ್ತೆ. ಅಂದಹಾಗೆ ಇವತ್ತು ಯಲ್ಲಾಪುರ ಪೊಲೀಸ್ರ ಕಪಿಮುಷ್ಟಿಯಲ್ಲಿ ತಗಲಾಕ್ಕೊಂಡವನ ಹೆಸರೇ ನಟೋರಿಯಸ್, ಭಯಾನಕ ದರೋಡೆಕೋರ, ಗೂಡಿನಬೈಲ್ ರಫೀಕ್..!

ತನಗೇ ತಾನೇ ಚೂರಿ ಹಾಕೊಂಡ..!
ಅಸಲು, ಈತ ಇವತ್ತು ಪೊಲೀಸ್ರ ಮೈಮೇಲೆ ಎಗರಿ ಡ್ರಾಗನ್ ನಿಂದ ಚುಚ್ಚಲು ಹೋಗಿದ್ದ. ಹೀಗಾಗಿ, ಯಲ್ಲಾಪುರ ಪೊಲೀಸರಲ್ಲಿ ಕೆಲವ್ರಿಗೆ ಗಾಯವಾಗಿದೆ. ನಂತ್ರ ಇನ್ನೇನು ಪೊಲೀಸ್ರು ನನ್ನ ಬಿಡಲ್ಲ ಅಂತ ಅರ್ಥವಾದ ಕೂಡಲೇ ತನಗೇ ತಾನು ಡ್ರಾಗನ್‌ನಿಂದ ಚುಚ್ಚಿಕೊಂಡು ಹೈಡ್ರಾಮ ಮಾಡಿದ್ದ. ಹೀಗಾಗಿ, ಇವನ‌ ಯಾವ ಡ್ರಾಮಾಗಳಿಗೂ ಅಂಜದ, ಅಳುಕದ ಪೊಲೀಸ್ ಟೀಂ ಆ ನಟೋರಿಯಸ್ ನ ಲಾಕ್ ಮಾಡಿದೆ. ಸದ್ಯ ಬೆಳಗಾವಿಯ ಸಿವಿಲ್ ಆಸ್ಪತ್ರೆಯಲ್ಲಿ ಆರೋಪಿಗೆ ಚಿಕಿತ್ಸೆ ನೀಡಲಾಗ್ತಿದೆ.

ಆತ ನಟೋರಿಯಸ್…!
ಯಸ್, ಕಳೆದ ಒಂದೂವರೇ ವರ್ಷದಿಂದ ಬೆಂಗಳೂರು, ಮಂಗಳೂರು, ಉಡುಪಿ, ಬೆಳಗಾವಿ ಸೇರಿ ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ದರೋಡೆ, ಕಳ್ಳತನ, ಚೈನ್ ಸ್ನ್ಯಾಚಿಂಗ್, ಮನೆಗಳ್ಳತನ, ಬ್ಯಾಂಕ್ ಕಳ್ಳತನ, ಬೈಕ್ ಕಳ್ಳತನ ಹಾಗೂ 307 ನಂತಹ 50 ಕ್ಕೂ ಹೆಚ್ಚು ಕೇಸುಗಳಿವೆ. ಈಗ್ಗೆ ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಜ್ಯುವೇಲ್ಲರಿ ಅಂಗಡಿಯೊಂದನ್ನ ಈತನ ಗ್ಯಾಂಗೇ ದರೋಡೆ ಮಾಡಿ ಎಸ್ಕೇಪ್ ಆಗಿತ್ತು. ವಿಚಿತ್ರ ಅಂದ್ರೆ ಕಳೆದ ಒಂದೂವರೇ ವರ್ಷದಿಂದ ಈತ ಅಷ್ಟೇಲ್ಲ ಕೃತ್ಯಗಳನ್ನ‌ ಮಾಡಿದ್ರೂ ಪೊಲೀಸ್ರಿಗೆ ಮಾತ್ರ ಸಿಕ್ಕಿರಲೇ ಇಲ್ಲ. ಜಸ್ಟ್ ಚಳ್ಳೇ ಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದ. ಅಂತವನು ಇವತ್ತು ಯಲ್ಲಾಪುರ ಪೊಲೀಸ್ರ ಬಲೆಗೆ ಬಿದ್ದಿದ್ದಾನೆ.

ಅವತ್ತು ಬುಧವಾರ..!
ಮೊನ್ನೆಯಷ್ಟೇ,ಅಂದ್ರೆ ಇವತ್ತಿಗೆ ಐದು ದಿನ ಆಯ್ತು.. ನವೆಂಬರ್ 11 ರಾತ್ರಿ, ಅಂದ್ರೆ 12 ರ ಬೆಳಗಿನ ಜಾವ ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಕೆವಿಜಿ ಬ್ಯಾಂಕ್ ನಲ್ಲಿ ಭಯಾನಕ ದರೋಡೆಗೆ ಬಂದಿಳಿದ್ದ ಅದೊಂದು ನಟೋರಿಯಸ್ ಗ್ಯಾಂಗ್ ಇನ್ನೇನು ದರೋಡೆಗೆ ಕೈ ಹಾಕುತ್ತಲೇ ಸೈರನ್ ಮೊಳಗಿರತ್ತೆ. ಹೀಗಾಗಿ, ತಮ್ಮ ಕೃತ್ಯಕ್ಕೆ ಅಡಚಣೆಯಾಗಿ, ಕುಡಿಯೋಕೆ ಆಗದಿದ್ರೂ ಉಳಿಸಿಬಿಡುವ ಯೋಚನೆ ಮಾಡಿತ್ತು ಆ ಗ್ಯಾಂಗ್, ಇಡೀ ಬ್ಯಾಂಕಿಗೇ ಬೆಂಕಿ ಇಟ್ಟು ಪರಾರಿಯಾಗಿದ್ದರು ದರೋಡೆಕೋರರು.
ಅಸಲು, ಅವತ್ತು ಬ್ಯಾಂಕಿಗೆ ಹಚ್ಚಿದ್ದ ಬೆಂಕಿಯಲ್ಲಿ, CCTV ಕ್ಯಾಮೆರಾ ಸೇರಿ ಎಲ್ಲವೂ ಕರಕಲಾಗಿತ್ತು. ಹೀಗಾಗಿ ದರೋಡೆಕೋರರ ಜಾಡು ಹಿಡಿಯುವುದು ಅಷ್ಟು ಸುಲಭದ ಮಾತು ಆಗಿರಲೇ ಇಲ್ಲ.

ಎರಡು ಟೀಂ..!
ಉಮ್ಮಚಗಿ ಬ್ಯಾಂಕ್ ದರೋಡೆಗೆ ವಿಫಲ ಯತ್ನ ನಡೆದು, ಇಡೀ ಉತ್ತರ ಕನ್ನಡವೇ ಬೆಚ್ಚಿ ಬಿದ್ದ ಕೇಸ್ ನ್ನು ಪತ್ತೆ ಹಚ್ಚಲು ಯಲ್ಲಾಪುರ ಪೊಲೀಸ್ರು ರೆಡಿಯಾಗಿ ನಿಂತಿದ್ರು. ಯಲ್ಲಾಪುರ ಪಿಐ ರಮೇಶ್ ಹನಾಪುರ ನೇತೃತ್ವದಲ್ಲಿ ಎರಡು ಟೀಂ ರಚನೆ‌ಮಾಡಿ ದರೋಡೆಕೋರರ ಹೆಡೆಮುರಿ ಕಟ್ಟಲು ಭರ್ಜರಿ ಪ್ಲ್ಯಾನ್ ಮಾಡಿ ಯಶಸ್ವಿಯಾಗಿದ್ದಾರೆ. ಈ ಕಾರಣಕ್ಕಾಗಿ ಕಳೆದ ಒಂದೂವರೇ ವರ್ಷದಿಂದ ರಾಜ್ಯದ ಹಲವು ಜಿಲ್ಲೆಗಳ ಪೊಲೀಸ್ರಿಗೆ ಚಳ್ಳೆ ಹಣ್ಣು ತಿನ್ನಿಸ್ತಿದ್ದ ರಫೀಕ್ ತುಫಕ್ ಅಂತ ತಗಲಾಕ್ಕೊಂಡಿದಾನೆ. ಹೀಗಾಗಿ ಯಲ್ಲಾಪುರ ಪೊಲೀಸ್ರ ಚಾಣಾಕ್ಷ ಟೀಂ ವರ್ಕ್ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

error: Content is protected !!