Terrible Fire Accident;
ಮುಂಡಗೋಡ ತಾಲೂಕಿನ ಹನಮಾಪುರದಲ್ಲಿ ಭಯಾನಕ ಘಟನೆ ನಡೆದಿದೆ. ಒಬ್ಬಂಟಿಯಾಗಿ ಬದುಕುತ್ತಿದ್ದ 70 ವರ್ಷದ ವೃದ್ದೆಯೊಬ್ಬರ ಮನೆ ಬೆಂಕಿಗೆ ಆಹುತಿಯಾಗಿದ್ದು, ಆ ಮನೆಯ ಕಿಚ್ಚಿನಲ್ಲೇ ಮನೆಯ ಯಜಮಾನಿ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ.

ಪಕೀರವ್ವ ರಾಮಣ್ಣ ಆಲೂರು(70), ಬೆಂಕಿಯಲ್ಲಿ ಬೆಂದವರಾಗಿದ್ದು, ಭಾರೀ ಸುಟ್ಟ ಗಾಯಗಳೊಂದಿಗೆ 108 ಅಂಬ್ಯುಲೆನ್ಸ್ ಮೂಲಕ ತಾಲೂಕಾಸ್ಪತ್ರೆಗೆ ರವಾನಿಸಲಾಗಿತ್ತು. ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ವೃದ್ದೆ ಸಾವನ್ನಪ್ಪಿದ್ದಾರೆ ಅಂತಾ ಮಾಹಿತಿ ಬಂದಿದೆ.
ಹನುಮಾಪುರದ ಮನೆಯಲ್ಲಿ ಆ ವೃದ್ದೆ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಳು ಎನ್ನಲಾಗಿದೆ. ಆದ್ರೆ ನಿನ್ನೆ ರಾತ್ರಿ ಮನೆಗೆ ಬೆಂಕಿ ಹೇಗೆ ತಗುಲಿತೊ ಗೊತ್ತಿಲ್ಲ, ಸಂಪೂರ್ಣ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.
