RTI CRIME; ಮುಂಡಗೋಡ ತಾಲೂಕಿನಲ್ಲಿ ಸಾಮಾಜಿಕ, ಧಾರ್ಮಿಕ ಕಾರ್ಯಗಳು ಅಂತೇಲ್ಲ ಹೇಳಿಕೊಂಡು ಉದ್ದುದ್ದ ಬಾಷಣ ಬಿಗಿತಿದ್ದ, ಪರಿಸರ ಸಂರಕ್ಷಣೆ ಅಂತೇಲ್ಲ ಫುಲ್ ಫೋಸು ಕೊಡುತ್ತಿದ್ದ ಭರ್ಜರಿ ಮಾತುಗಾರ ಮಹದೇಶ್ವರ ಲಿಂಗದಾಳ ಸಾಹೇಬ್ರು ಕೊನೆಗೂ ಹುಬ್ಬಳ್ಳಿ ಪೊಲೀಸರ ಅತಿಥಿಯಾಗಿದ್ದಾರೆ. ಸನ್ಮಾನ್ಯರು ತಮ್ಮ ಮಗ ಹಾಗೂ ಇನ್ನೂ ಮೂವರ ಗುಂಪು ಕಟ್ಟಿಕೊಂಡು RTI ಹೆಸರಲ್ಲಿ ಅಕ್ಷರಶಃ ದಂಧೆಗಿಳಿದಿದ್ರಾ ಅನ್ನೋ ಅನುಮಾನ ಇವತ್ತಿನ ಘಟನೆ ನೋಡಿದ್ರೆ ಎಂಥವರಿಗೂ ಅನ್ನಿಸದೇ ಇರಲ್ಲ..!

ಇದು ಘಟನೆ..!
ಅಂದಹಾಗೆ, ಹುಬ್ಬಳ್ಳಿಯ ಗೋಕುಲ್ ರೋಡ್ ನಲ್ಲಿರುವ ಸಮೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಸೇಲ್ಸ್ ಹೆಡ್ ಮತ್ತು ಮ್ಯಾನೇಜರ್ ಗೆ ಸೊಸೈಟಿಯ ವಿರುದ್ದ ಸುಳ್ಳು ಆರೋಪ ಮಾಡಿ ಗದಗಿನ ಮಂಜುನಾಥ ಬೆಟಗೇರಿ ಹಾಗೂ ಮುಂಡಗೋಡಿನ ಮಹದೇಶ್ವರ ಲಿಂಗದಾಳ ಸೇರಿ ಮಾಹಿತಿ ಹಕ್ಕು ನಿಯಮದಡಿ ಮಾಹಿತಿ ನೀಡುವಂತೆ ಅರ್ಜಿ ಹಾಕಿದ್ದರು, ಮಾಹಿತಿ ನೀಡದಿದ್ದರೆ ಬರೋಬ್ಬರಿ 1.5 ಕೋಟಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ಸೊಸೈಟಿಯವರು ಪೊಲೀಸರಿಗೆ ದೂರು ನೀಡಿದ್ದರು.
ಅದ್ರಂತೆ, ವಂಚಕರಿಗಾಗಿ ಬಲೆ ಬೀಸಿ ಕೂತಿದ್ದ ಗೋಕುಲ ಠಾಣೆ ಪೊಲೀಸ್ರು ಕೊನೆಗೂ ವಂಚಕರನ್ನು ಬಲೆಗೆ ಕೆಡವಿದ್ದಾರೆ. ಪೊಲೀಸರ ಸಹಕಾರದೊಂದಿಗೆ ಸೊಸೈಟಿಯವರು ಗುರುವಾರ ಹಣ ನೀಡುವುದಾಗಿ ಹುಬ್ಬಳ್ಳಿಗೆ ಕರೆಸಿ ಆರೋಪಿಗಳನ್ನು ಲಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 1.5 ಕೋಟಿ ಹಣಕ್ಕೆ ಬೇಡಿಕೆ ಇಟ್ಟು ನಂತರ ಪೊಲೀಸರಿಗೆ ಸಿಕ್ಕಿಬಿದ್ದ ಮುಂಡಗೋಡಿನ ತಂದೆ ಮಗ ಸೇರಿ ಐವರನ್ನು ಹುಬ್ಬಳ್ಳಿ ಪೊಲೀಸರು ಬಂದಿಸಿ, 1.70 ಲಕ್ಷ ವಶಪಡಿಸಿಕೊಂಡಿದ್ದಾರೆ.

ಮುಂಡಗೋಡಿನ ವಿರೇಶಕುಮಾರ್ ಲಿಂಗದಾಳ, ಮಹದೇಶ್ವರ ಲಿಂಗದಾಳ, ಮಹಾಬಲೇಶ್ವರ ಶಿರೂರ್, ಶಿವಪ್ಪ ಬೊಮ್ಮನಹಳ್ಳಿ ಹಾಗೂ ಗದಗಿನ ಮಂಜುನಾಥ್ ಹದ್ದಣ್ಣವರ ಮಬುವವರನ್ನು ಪೊಲೀಸರು ಬಂಧಿಸಿದ್ದಾರೆ.
RTI ಹೆಸರಿನಲ್ಲಿ ಬೆದರಿಕೆ..!
RTI ಹೆಸರಲ್ಲಿ ಮುಂಡಗೋಡಿನಲ್ಲಿ ಕೆಲವ್ರು ದಂಧೆಗಿಳಿದಿದ್ದಾರೆ. ಎರಡ್ಮೂರು ಜನರ ಗ್ಯಾಂಗ್ ಕಟ್ಟಿಕೊಂಡು ಮುಂಡಗೋಡ, ಶಿರಸಿ, ಹಾವೇರಿ, ಶಿಗ್ಗಾವಿ ಸೇರಿದಂತೆ ವಿವಿಧ ಕಡೆ ಹಣ ಎತ್ತುವಳಿ ಮಾಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಕೆಲಸ ಇಲ್ಲದೇ RTI ಯನ್ನೇ ಅಸ್ತ್ತವಾಗಿಸಿಕೊಂಡ ಹಲವರು ಇದನ್ನೇ ದಂಧೆಯಾಗಿಸಿಕೊಂಡಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳಿಗೆ, ಸೊಸೈಟಿಗಳಿಗೆ ಹೆದರಿಸಿ, RTI ಅಸ್ತ್ರ ಬಳಸಿ ದುಡ್ಡು ಪೀಕುತ್ತಿದ್ದಾರೆ ಅನ್ನುವ ಆರೋಪಗಳು ಕೇಳಿ ಬಂದಿವೆ. ಇವ್ರು ಮುಂಡಗೋಡ ಅಲ್ಲದೇ ಪಕ್ಕದ ತಾಲೂಕುಗಳಲ್ಲಿಯೂ ಇದೇ ದಂಧೆ ನಡೆಸುತ್ತ ಹಣ ಮಾಡುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ, ಅಧಿಕಾರಿಗಳು ಇಂತವರಿಂದ ಎಚ್ಚರಿಕೆಯಿಂದ ಇರಬೇಕಾಗಿದೆ.
