Sad News; ದಾವಣಗೆರೆ: ರಾಜ್ಯಾದ್ಯಂತ ಹೆಸರು ಮಾಡಿದ್ದ ದಾವಣಗೆರೆಯ ಹೈಸ್ಪೀಡ್ ಮಣಿ ನಾಮಾಂಕಿತದ ಟಗರು ಅಕಾಲಿಕವಾಗಿ ಸಾವನ್ನಪ್ಪಿದೆ. ನೆಚ್ಚಿನ ಟಗರಿನ ಸಾವಿನಿಂದ ಸಾವಿರಾರು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ದಾವಣಗೆರೆಯ ಹೊಸ ಕುಂದುವಾಡ ಗ್ರಾಮದ ಹೈಸ್ಪೀಡ್ ಮಣಿ ಎನ್ನುವ ಟಗರು ರಾಜ್ಯಾದ್ಯಂತ ವಿವಿಧ ಟಗರು ಕಾಳಗದಲ್ಲಿ ಸ್ಪರ್ಧಿಸಿ ಹೆಸರು ಮಾಡಿತ್ತು. ಟ್ರೋಫಿ, ಬೈಕ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು.

ಹೊಸ ಕುಂದುವಾಡ ಗ್ರಾಮದ ಹಾಲೇಶ್ ಎಂಬುವರು ಪ್ರೀತಿಯಿಂದ ಈ ಹೈಸ್ಪೀಡ್ ಮಣಿ ಟಗರನ್ನು ಸಾಕಿದ್ದರು. ಭಾನುವಾರ ಟಗರು ಕಾಳಗ ಮುಗಿಸಿ ವಾಪಸಾಗುವಾಗ ಇದ್ದಕ್ಕಿದ್ದಂತೆ ಟಗರು ಕುಸಿದು ಬಿದ್ದು ಸಾವನಪ್ಪಿದೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ. ಪ್ರೀತಿಯಿಂದ ಸಾಕಿದ್ದ ಟಗರನ್ನು ಮಾಲೀಕ ಹಾಲೇಶ್ ಇಡೀ ಕುಂದವಾಡದಲ್ಲಿ ಮೆರವಣಿಗೆ ಮಾಡಿದ್ದು, ಸಾವಿರಾರು ಅಭಿಮಾನಿಗಳು ಹೆಜ್ಜೆ ಹಾಕಿದರು. ಹೊಸ ಕುಂದವಾಡ ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಬಳಿಕ ಹೈಸ್ಪೀಡ್ ಮಣಿಯ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಟಗರು ಮಾಲೀಕ ಹಾಲೇಶ್ ಮನೆ ಮುಂಭಾಗವೇ ಅಂತ್ಯಸಂಸ್ಕಾರ ಮಾಡಿದ್ದು ವಿಶೇಷವಾಗಿತ್ತು. ಇಡೀ ರಾಜ್ಯದಲ್ಲಿ ನೂರಾರು ಕಡೆ ಟಗರು ಕಾಳಗದಲ್ಲಿ ಭಾಗಿಯಾಗಿದ್ದ ಹೈಸ್ಪೀಡ್ ಮಣಿ ಹಲವು ಪ್ರಶಸ್ತಿಗಳನ್ನು ಪಡೆದಿತ್ತು. ಟಗರು ಕಾಳಗದಲ್ಲಿ ಇದರ ಆಟ ನೋಡಿಯೇ ಸಾಕಷ್ಟು ಮಂದಿ ಅಭಿಮಾನಿಗಳಾಗಿದ್ದರು. ಅಲ್ಲದೆ ಲೆಕ್ಕವಿಲ್ಲದಷ್ಟು ಕುರಿಗಳನ್ನು ಕಣದಲ್ಲಿ ಸೋಲಿಸಿರುವ ಖ್ಯಾತಿ ಈ ಹೈಸ್ಪೀಡ್ ಮಣಿಗಿದೆ.
ಪ್ರಮುಖ ಸುದ್ದಿಗಳು;ವಯಸ್ಸು 45 ಆದ್ರೂ ಮದುವೆ ಆಗಲಿಲ್ಲ, ಅದೇ ಕೊರಗಲ್ಲೇ ಚಾಕು ಇರಿದುಕೊಂಡ, ಆತ್ಮಹತ್ಯೆಗೆ ಯತ್ನಿಸಿದ..!
ಮುಂಡಗೋಡಿನ ಕಿರಣ್ ಸಾಳುಂಕೆಗೆ ಗಡಿಪಾರು..!ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಶಿರಸಿ ಎಸಿ ಆದೇಶ..!!
