Crime News; ಟ್ರಾಕ್ಟರ್ ರೂಟರ್ ನಲ್ಲಿ ಕಾಲು ಸಿಲುಕಿ ಇಡೀ ಕಾಲೇ ಕಟ್ ಆಗಿರೋ ಭೀಕರ ಘಟನೆ ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಅತ್ತಿವೇರಿ ಸಮೀಪದ ಗದ್ದೆಯಲ್ಲಿ ನಡೆದಿದೆ.

ಮುಂಡಗೋಡ ತಹಶೀಲ್ದಾರ ಕಚೇರಿಯ ನೆಮ್ಮದಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ
ಮೂಲತಃ ಮಲವಳ್ಳಿ ಗ್ರಾಮದ ತುಕಾರಾಂ ಹನ್ಮಂತಪ್ಪ ಪಾಟೀಲ್(38) ಎಂಬುವವರೇ ಭೀಕರ ಘಟನೆಯಲ್ಲಿ ತಮ್ಮ ಬಲಗಾಲು ಕಳೆದುಕೊಂಡಿದ್ದಾರೆ.
ಇಂದು ತಮ್ಮ ಗದ್ದೆಯಲ್ಲಿ ಟ್ರಾಕ್ಟರ್ ರೂಟರ್ ನಿಂದ ಹೊಲದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ, ಆಕಸ್ಮಿಕವಾಗಿ ಕಾಲು ರೂಟರ್ ನಲ್ಲಿ ಸಿಲುಕಿಕೊಂಡಿದೆ. ಹೀಗಾಗಿ, ಕೆಲಕ್ಷಣಗಳಲ್ಲೇ ಕಾಲು ನುಜ್ಜುಗುಜ್ಜಾಗಿದ್ದು, ತಕ್ಷಣವೇ ಅಂಬ್ಯುಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ SDM ಗೆ ದಾಖಲಿಸಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
