Death News: ಮುಂಡಗೋಡಿನ ಹಿರಿಯ ಕಾಷ್ಟ ಕಲಾವಿದ, ರಥಶಿಲ್ಪಿ ವಿರೂಪಾಕ್ಷಪ್ಪ ಶಿವಪ್ಪ ಬಡಿಗೇರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವ್ರು ಗುರುವಾರ ನಿಧನರಾಗಿದ್ದು, ವಿಶ್ವಕರ್ಮ ಸಮುದಾಯದ ಮುಖಂಡರು ಕಂಬನಿ ಮಿಡಿದಿದ್ದಾರೆ.

ಮೃತ ವಿರೂಪಾಕ್ಷಪ್ಪ ಬಡಿಗೇರ್ ಪಟ್ಟಣದ ಗ್ರಾಮದೇವಿ ದೇವಸ್ಥಾನದ ರಥವನ್ನು ನಿರ್ಮಿಸಿದ್ದರು. ಅಲ್ಲದೇ ಕಟ್ಟಿಗೆಯಲ್ಲಿ ಸೂಕ್ಷ್ಮ ಕುಸೂರಿ ಕೆತ್ತನೆಯಲ್ಲಿ ಪರಿಣಿತಿ ಹೊಂದಿದ್ದರು. ಮೃತರ ಅಂತ್ಯಕ್ರಿಯೆ ಇಂದು ಶುಕ್ರವಾರ ನಡೆಯಲಿದೆ ಅಂತಾ ಮೃತರ ಪುತ್ರ ಚಿದಾನಂದ ವಿರೂಪಾಕ್ಷಪ್ಪ ಬಡಿಗೇರ ತಿಳಿಸಿದ್ದಾರೆ.
