ಖ್ಯಾತ ಹಾಸ್ಯನಟ, ಕಲಿಯುಗದ ಕುಡುಕ ಖ್ಯಾತಿಯ, ಧಾರವಾಡ ರಂಗಾಯಣದ ನಿರ್ದೇಶಕರಾಗಿದ್ದ ರಾಜು ತಾಳಿಕೋಟೆ ನಿಧನರಾಗಿದ್ದಾರೆ.

ವೃತ್ತಿ ರಂಗಭೂಮಿ, ಚಲನಚಿತ್ರ ಹಾಗೂ ಬಿಗ್ ಬಾಸ್ ಸೇರಿದಂತೆ ಸಾಕಷ್ಟು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಮನೆ ಮಾತಾಗಿದ್ದ ಕಲಿಯುಗದ ಕುಡುಕ ಎಂದೇ ಪ್ರಖ್ಯಾತರಾಗಿರುವ ರಾಜು ತಾಳಿಕೋಟೆಯವರು ಇಂದು ಮಣಿಪಾಲದಲ್ಲಿ ಸಂಜೆ ನಾಲ್ಕು ಗಂಟೆಗೆ ನಿಧನರಾಗಿದ್ದಾರೆ.

ಶೂಟಿಂಗ್ ಗೆ ಬಂದಿದ್ದ ಸಮಯದಲ್ಲಿ ಅವರಿಗೆ ಸ್ವಲ್ಪ ಎದೆ ನೋವು ಕಾಣಿಸಿಕೊಂಡೊತ್ತು, ಹೀಗಾಗಿ ತಕ್ಷಣವೇ ಅವರನ್ನು ಹತ್ತಿರದ ಮಣಿಪಾಲಿಗೆ ಕರೆದುಕೊಂಡು ಹೋಗಿ, ಆಸ್ಪತ್ರೆಗೆ ಧಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ರಾಜು ತಾಳಿಕೋಟಿ ನಿಧನರಾಗಿದ್ದಾರೆ.

error: Content is protected !!