ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಮತ್ತೊಮ್ಮೆ ರವಿಗೌಡ ಪಾಟೀಲರೇ ಕಿಂಗ್..!

Marketing Society: ಮುಂಡಗೋಡ ತಾಲೂಕಿನ ಪ್ರತಿಷ್ಟಿತ ಮಾರ್ಕೆಟಿಂಗ್ ಸೊಸೈಟಿಗೆ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಹಿರಿಯ ಮುಖಂಡ ರವಿಗೌಡ ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಬಾಬುರಾವ್ ಲಾಡನವರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರವಿಗೌಡ್ರಿಗೆ “ಅನಾಯಾಸ” ಪಟ್ಟ..!
ಅಸಲು, ಮುಂಡಗೋಡಿನ ಪ್ರತಿಷ್ಟಿತ ಮಾರ್ಕೆಟಿಂಗ್ ಸೊಸೈಟಿ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದ ಕಾಂಗ್ರೆಸ್ ಬೆಂಬಲಿತರು, ಬಿಜೆಪಿಯನ್ನು ಧೂಳಿಪಟ ಮಾಡಿದ್ದರು. ಹೀಗಾಗಿ, ಬಹುತೇಕ ಅಧ್ಯಕ್ಷರಾಗಿ ಹಿರಿಯ ದುರೀಣ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರವಿಗೌಡ ಪಾಟೀಲರಿಗೆ ಅಧ್ಯಕ್ಷ ಪಟ್ಟ ಬಹುತೇಕ ಫಿಕ್ಸ್ ಆದಂತಾಗಿತ್ತು.
ಅಲ್ದೆ, ಅವರ ಅಧ್ಯಕ್ಷ ಗಾದಿಯ ಹಾದಿ ಬಹುತೇಕ ಸುಗಮವಾಗಿತ್ತು. ಹೀಗಾಗಿನೇ ಮಾಜಿ ಶಾಸಕ ವಿ.ಎಸ್.ಪಾಟೀಲ್ ಹಾಗೂ ವಿವೇಕ್ ಹೆಬ್ಬಾರ್ ನೆತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಅಧ್ಯಕ್ಷರ ಆಯ್ಕೆಯ ಖಚಿತತೆ ಸಿಕ್ಕಂತಾಗಿತ್ತು. ಅದಕ್ಕಾಗಿಯೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬೊಬ್ಬರಷ್ಟೇ ನಾಮಪತ್ರ ಸಲ್ಲಿಸಿ ಅವಿರೋಧ ಆಯ್ಕೆಯ ಹಾದಿ ಸುಗಮಗೊಳಿಸಿಕೊಂಡಿದ್ದರು.

ಉಪಾಧ್ಯಕ್ಷರದ್ದು “ನಸೀಬಿ”ನ ಆಟ..!
ಅಂದಹಾಗೆ, ಮಾರ್ಕೆಟಿಂಗ್ ಸೊಸೈಟಿಗೆ ಉಪಾಧ್ಯಕ್ಷರ ಆಯ್ಕೆ ನಿಜಕ್ಕೂ ಯಾರೂ ಉಹಿಸದ ಹಾಗೆ ನಡೆದುಹೋಗಿದೆ. ಮೊದ ಮೊದಲು ಬೇರೆ ಬೇರೆ ಹೆಸರುಗಳು ಕೇಳಿ ಬಂದಿದ್ದವು. ಆದ್ರೆ, ಏಕಾಏಕಿ ಶನಿವಾರ ಬೆಳಿಗ್ಗೆ ನಡೆದ “IB” ಸಭೆಯಲ್ಲಿ ಉಪಾಧ್ಯಕ್ಷರಾಗಿ ಬಾಬುರಾವ್ ಲಾಡನವರ್ ಹೆಸರು ಪಕ್ಕಾ ಆಗಿತ್ತು.

ಒಟ್ನಲ್ಲಿ, ಮುಂಡಗೋಡ ತಾಲೂಕಿನ ಪ್ರತಿಷ್ಟಿತ ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದು ಕಾಂಗ್ರೆಸ್ ನ ಕೈಗೆ ಮತ್ತಷ್ಟು ಬಲ ಬಂದಂತಾಗಿದೆ.

*********

ಇಸನ್ನೂ ಓದಿ; ಗದ್ದೆಯಲ್ಲಿ ಅಣ್ಣತಮ್ಮರ ಮೇಲೆ ಚಿರತೆಯ ಭಯಾನಕ ದಾಳಿ; ಓರ್ವ ಸಾವು, ಮತ್ತೋರ್ವನಿಗೆ ಗಂಭೀರ ಗಾಯ..!

error: Content is protected !!