ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಅಧ್ಯಕ್ಷರಾಗಿ ರವಿಗೌಡ ಪಾಟೀಲ್ ಅವಿರೋಧ ಆಯ್ಕೆ..? ಎರಡನೇ ಬಾರಿಗೆ ಪಟ್ಟಕ್ಕೇರ್ತಾರಾ ಗೌಡ್ರು..?

Marketing Society: ಮುಂಡಗೋಡ ತಾಲೂಕಿನ ಪ್ರತಿಷ್ಟಿತ ಮಾರ್ಕೆಟಿಂಗ್ ಸೊಸೈಟಿಗೆ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಹಿರಿಯ ಮುಖಂಡ ರವಿಗೌಡ ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಬಾಬಣ್ಣ ಲಾಡನವರ್ ಅವಿರೋಧವಾಗಿ ಆಯ್ಕೆಯಾಗೋದು ಬಹುತೇಕ ಖಚಿತವಾದಂತಾಗಿದೆ.

ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ್, ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ನೇತೃತ್ವದಲ್ಲಿ ಸೇರಿದ್ದ ನೂತನ ಸದಸ್ಯರ ಸಭೆಯಲ್ಲಿ, ಅಧ್ಯಕ್ಷರನ್ನಾಗಿ ರವಿಗೌಡ ಪಾಟೀಲ್ ಹಾಗೂ ಉಪಾಧ್ಯಕ್ಷರನ್ನಾಗಿ ಬಾಬಣ್ಣ ಲಾಡನವರ್ ರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ನಂತರ ಇಬ್ಬರೂ ತಮ್ಮ‌ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

error: Content is protected !!