Boycott Anganwadi; ಸ್ಥಳೀಯರನ್ನು ಬಿಟ್ಟು ಬೇರೆ ಗ್ರಾಮದವರನ್ನು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ನೇಮಕ ಮಾಡಿರೋ ಕಾರಣಕ್ಕೆ, ಮುಂಡಗೋಡ ತಾಲೂಕಿನ ನಂದಿಪುರ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳಿಸದೇ ಬಹಿಷ್ಕರಿಸಿದ್ದಾರೆ. ಹೀಗಾಗಿ, ಕಳೆದ ನಾಲ್ಕೈದು ದಿನಗಳಿಂದ ನಂದಿಪುರದ ಅಂಗನವಾಡಿ ಕೇಂದ್ರ ಮಕ್ಕಳಿಲ್ಲದೇ ಇಂದು ಬೀಕೋ ಎನ್ನುತ್ತಿತ್ತು.

ಅಂದಹಾಗೆ, ನಂದಿಪುರದ ಅಂಗನವಾಡಿಯಲ್ಲಿ ಕಾರ್ಯಕರ್ತೆಯ ಹುದ್ದೆ ಖಾಲಿಯಾಗಿತ್ತು. ಹೀಗಾಗಿ, ನೂತನವಾಗಿ ಕಾರ್ಯಕರ್ತೆಯ ಆಯ್ಕೆ ನಡೆದಿದೆ. ಈ ವೇಳೆ ಗ್ರಾಮದಿಂದ ಸುಮಾರು ಆರು ಕೀಮಿ ದೂರವಿರೋ ಮಹಿಳೆಯೊಬ್ಬರಿಗೆ ಅಂಗನವಾಡಿ ಕಾರ್ಯಕರ್ತೆಯ ಹುದ್ದೆ ನೀಡಲಾಗಿದೆ. ಸ್ಥಳೀಯವಾಗಿ ಅರ್ಹರು ಇದ್ದರೂ ಅವ್ರಿಗೆ ಹುದ್ದೆ ನೀಡಲಾಗಿಲ್ಲ‌. ಹೀಗಾಗಿ, ಇದನ್ನು ಖಂಡಿಸಿರೋ ಗ್ರಾಮಸ್ಥರು ಅಂಗನವಾಡಿಗೆ ತಮ್ಮ‌ ಮಕ್ಕಳನ್ನು ಕಳಿಸದೇ ಬಹಿಷ್ಕರಿಸಿದ್ದಾರೆ.

 

error: Content is protected !!