Hubli Crime News; ಹುಬ್ಬಳ್ಳಿ: ಯುವಕನೊಬ್ಬನನ್ನು ಮನೆಯಲ್ಲಿ ಮಲಗಿದ್ದವನನ್ನು ಕರೆಯಿಸಿ ಪುಂಡರ ಗ್ಯಾಂಗ್ ಒಂದು ರಾಡ್, ತಲ್ವಾರನಿಂದ ಹಲ್ಲೆ ಮಾಡಿದ ಘಟನೆ ಹುಬ್ಬಳ್ಳಿಯ ಸೆಟ್ಲಮೆಂಟ್‌ ಏರಿಯಾದಲ್ಲಿ ನಡೆದಿದೆ.

ಮಹೇಶ ಭಾರ್ಕೆರ ಎಂಬಾತನೇ ಹಲ್ಲೆಗೊಳಗಾದ ಯುವಕ, ಈತ ಮನೆಯಲ್ಲಿ ಮಲಗಿದ್ದಾಗ, ಯುವಕರ ಗ್ಯಾಂಗ್ ಒಂದು ಅವನನ್ನು ಕರೆದು ಕುತ್ತಿಗೆಗೆ ಚಾಕು ಹಾಕಿ, ತಲೆಗೆ ರಾಡ್, ತಲ್ವಾರ್‌ನಿಂದ ಹಲ್ಲೆ ಮಾಡಿದ್ದಾರೆ. ಆಗ ಮಹೇಶ ಭಾರ್ಕೆರ ಅವರಿಂದ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಓಡಿ ಹೋಗಿದ್ದಾನೆ. ಪೊಲೀಸರು ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

error: Content is protected !!