Death News; ಶಿಗ್ಗಾವಿಯ BEO ಕಾರ್ಯಾಲಯದಲ್ಲಿ ಹಿರಿಯ ಮೆನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ, ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದ ಪ್ರಸನ್ನ ಗಣಪತಿ ಜಾಧವ್(49) ನಿಧನರಾಗಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ, ಚಿಕಿತ್ಸೆ ಫಲಿಸದೆ ಇಂದು (ಸೋಮವಾರ) ಬೆಳಗಿನ ಜಾವ ನಿಧನರಾಗಿದ್ದಾರೆ ಅಂತಾ ತಿಳಿದು ಬಂದಿದೆ. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಸಂತಾಪ..!
ಇನ್ನು, ಪ್ರಸನ್ನ ಜಾಧವ್ ಅವರ ನಿಧನಕ್ಕೆ ಶಿಗ್ಗಾವಿ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ್ ಅಂಬಿಗೇರ್, ನೌಕರ ಸಂಘದ ಅಧ್ಯಕ್ಷ ಅರುಣ್ ಹುಡೇದ್ ಗೌಡ್ರ, ಬೋಧಕೇತರ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಬೋಂಗಾಳೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು,ಸದಸ್ಯರು, ಹಾಗೂ ಶಿಗ್ಗಾವಿ ತಾಲೂಕಿನ ಶಿಕ್ಷಕ ವೃಂದ ತೀವ್ರ ಸಂತಾಪ ಸೂಚಿಸಿದೆ.