Police Raid News; ಉಡ್ತಾ ಬೆಳಗಾವಿಗೆ ಡ್ರಗ್ಸ್ ಸಪ್ಲೈ ಮಾಡಿತ್ತಿದ್ದ ಗ್ಯಾಂಗ್ ಅರೇಸ್ಟ್ ಆಗಿದೆ. ಕುಂದಾನಗರಿಯ ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ, ಬೆಳಗಾವಿಗೆ ಗಾಂಜಾ, ಪೆನ್ನಿ, ಹೇರಾಯಿನ ಸಪ್ಲೈ ಮಾಡಿತ್ತಿದ್ದ ಗ್ಯಾಂಗ್ ಅಂದರ್ ಆಗಿದೆ. ಥೇಟು, ಪುಷ್ಪಾ ಚಿತ್ರದ ಸ್ಟೈಲ್ ನಲ್ಲಿ ಗ್ಯಾಂಗ್ ಕಟ್ಟಿಕೊಂಡು ಡ್ರಗ್ಸ್ ದಂಧೆಗಿಳಿದಿದ್ದವರು, ಮುಂಬೈನಲ್ಲಿ ಡ್ರಗ್ಸ್ ಮಾಫಿಯಾ ಕಿಂಗ್ ಪಿನ್ ಜೊತೆಗೆ ಅರೇಸ್ಟ್ ಆಗಿದ್ದಾರೆ.

ಬೆಳಗಾವಿ ಸಿಇಎನ್ ಇನ್ಸ್ಪೆಕ್ಟರ್ ಬಿ.ಆರ್.ಗಡ್ಡೆಕರ ಟೀಮ್ ನಿಂದ ಭರ್ಜರಿ ಕಾರ್ಯಾಚರಣೆ ನಡೆದಿದ್ದು, ಬೆಳಗಾವಿ ನಗರ ಪೊಲೀಸರಿಂದ ಇದೊಂದು ಅತಿ ದೊಡ್ಡ ಕಾರ್ಯಾಚರಣೆ ಎನ್ನಲಾಗಿದೆ. 50 ಕೆಜೆ ಗಾಂಜಾ, 9 ಜನ ಡ್ರಗ್ಸ್ ಸಪ್ಲೈಯರ್ ಅರೇಸ್ಟ್ ಆಗಿದ್ದಾರೆ. ಇದ್ರೊಂದಿಗೆ, ಬರೋಬ್ಬರಿ 30 ಲಕ್ಷ ಮೌಲ್ಯದ ಮಾದಕವಸ್ತು, 13 ಮೊಬೈಲ್, ಡಿಜಿಟಲ್ ಹ್ಯಾಂಗರ್ ತಕ್ಕಡಿ, ಎರಡು ಕಾರ ಜಪ್ತಿ ಮಾಡಿಕೊಳ್ಳಲಾಗಿದೆ.

ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ ಧಾರವಾಡ ಮತ್ತು ಗೋವಾ, ಮಹಾರಾಷ್ಟ್ರದಲ್ಲಿ ಡ್ರಗ್ಸ್ ಸಪ್ಲೈ ಮಾಡಿತ್ತಿದ್ದ ಗ್ಯಾಂಗ್, ಓಡಿಸಾ, ಮುಂಬೈ, ಪುಣೆ, ಮಧ್ಯಪ್ರದೇಶದಿಂದ ಗಾಂಜಾ ತೆಗೆದುಕೊಂಡು ಬಂದು ದಂಧೆ ಮಾಡ್ತಿದ್ದರು.

ಆರೋಪಿಗಳಾದ ಮುಂಬೈನಲ್ಲಿದ್ದ ಕಿಂಗ್ ಪಿನ್ ಇಸ್ಮಾಯಿಲ್ ಸದ್ದಾಂ ಸಯ್ಯದ (35), ತಾಜೀರ್ ಬಸ್ತವಾಡೆ, ಪ್ರಥಮೇಶ ಲಾಡ್, ತೇಜಸ್ ವಾಜರೆ, ಶಿವಕುಮಾರ್ ಆಸಬೆ, ರಮಜಾನ್ ಜಮಾದಾರ, ತಾಜೀಬ್ ಮುಲ್ಲಾ, ಅನುರಾಗ ಎಂಬುವವರು ಅರೇಸ್ಟ್ ಆಗಿದ್ದಾರೆ.

ಸಧ್ಯ ಪೊಲೀಸರು ಆರೋಪಿಗಳನ್ನು ಹಿಂಡಲಗಾ ಜೈಲಿಗೆ ಅಟ್ಟಿದ್ದಾರೆ. ಬೆಳಗಾವಿ ಪೊಲೀಸ್ ಕಮೀಷನರ್ ಭೂಷಣ್ ಬೊರಸೆಯಿಂದ ಸಿಇಒ ಪೊಲೀಸ್ ತಂಡಕ್ಕೆ ನಗದು ಬಹುಮಾನ ಘೋಷಣೆ ಮಾಡಲಾಗಿದೆ.

error: Content is protected !!