Mundgod School Holiday:
ಮುಂಡಗೋಡ ಭಾರೀ ಮಳೆ ಸುರಿಯುತ್ತಿರೋ ಹಿನ್ನೆಲೆಯಲ್ಲಿ ನಾಳೆ ಮುಂಡಗೋಡ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಳೆಯ ರಜೆ ಘೋಷಣೆ ಮಾಡಲಾಗಿದೆ.
ಈಗಾಗಲೇ, ಜಿಲ್ಲಾಧಿಕಾರಿಗಳು ಆದೇಶಿಸಿರುವಂತೆ ಜಿಲ್ಲೆಯ ಕಾರವಾರ, ಅಂಕೋಲಾ, ಭಟ್ಕಳ, ಕುಮಟಾ, ಹೊನ್ನಾವರ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೋಯಿಡಾ, ಹಳಿಯಾಳ ಹಾಗೂ ದಾಂಡೇಲಿ ತಾಲೂಕುಗಳಿಗೆ ನಿನ್ನೆಯಿಂದಲೂ ಮಳೆಯ ರಜೆ ಘೋಷಣೆ ಮಾಡಲಾಗಿದೆ. ಆದ್ರೆ, ಮುಂಡಗೋಡ ತಾಲೂಕಿಗೆ ಮಾತ್ರ ರಜೆ ಘೋಷಣೆ ಮಾಡಿರಲಿಲ್ಲ.
ಆದ್ರೆ, ಸಂಜೆ ಜಿಲ್ಲಾಧಿಕಾರಿಗಳು ಮತ್ತೆ ಮುಂಡಗೋಡ ಹೊರತು ಪಡಿಸಿ, ಜಿಲ್ಲೆಯ 11 ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಿದ ನಂತರ, ಮುಂಡಗೋಡ ತಾಲೂಕಾಡಳಿತ ಮುಂಡಗೋಡ ತಾಲೂಕಿನ ಶಾಲೆಗಳಿಗೆ ಮಳೆಯ ರಜೆ ಅಂತಾ ಘೋಷಣೆ ಮಾಡಿದ್ದಾರೆ.