Loan Transfer to Reduce EMI: ಭಾರತೀಯ ರಿಸರ್ವ್ ಬ್ಯಾಂಕ್ (RBI)ನ ವಿತ್ತ ನೀತಿ ಸಮಿತಿ (MPC) ಸಭೆ ಇಂದು ಬುಧವಾರ ಮುಕ್ತಾಯಗೊಂಡಿದ್ದು, ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಸಭೆಯ ನಿರ್ಣಯಗಳನ್ನು ಪ್ರಕಟಿಸಿದ್ದಾರೆ.

ಈ ಬಾರಿ ಆರ್‌ಬಿಐ ತನ್ನ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ, 5.50% ರಲ್ಲಿ ಸ್ಥಿರವಾಗಿರಿಸಿದೆ. ಹೀಗಾಗಿ, ಆರ್‌ಬಿಐನ ಈ ನಿರ್ಧಾರದಿಂದ ಸಾಲ ಪಡೆಯುವವರು ಅಥವಾ ಇಎಂಐ ಪಾವತಿಸುವವರಿಗೆ ಯಾವುದೇ ರಿಲೀಫ್‌ ಸಿಕ್ಕಿಲ್ಲ.

ಆದರೂ ಕೂಡ ನಿಮ್ಮ ಸಾಲದ EMI ಹೊರೆ ಹೆಚ್ಚಿದ್ದರೆ, ಅದನ್ನು ಕಡಿಮೆ ಮಾಡಿಕೊಳ್ಳಲು ಅವಾಕಾಶವಿದೆ. ನಿಮ್ಮ ಇಎಂಐ ಕಡಿಮೆ ಮಾಡಲು ಮತ್ತು ಹಣ ಉಳಿಸಲು ಸಹಾಯ ಮಾಡುವ ಒಂದು ಸುಲಭ ಮಾರ್ಗವಿದೆ. ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.

ಇಎಂಐ ಕಡಿಮೆ ಮಾಡಲು ಲೋನ್ ವರ್ಗಾವಣೆ
ಲೋನ್ ವರ್ಗಾವಣೆ (Loan Transfer) ಮೂಲಕ ನಿಮ್ಮ EMI ಹೊರೆ ಇಳಿಕೆ ಮಾಡಬಹುದು. ನಿಮ್ಮ ಲೋನ್‌ ಇಎಂಐ ಕಡಿಮೆ ಮಾಡಲು, ನಿಮ್ಮ ಸಾಲವನ್ನು ಪ್ರಸ್ತುತ ಬ್ಯಾಂಕ್‌ಗಿಂತ ಕಡಿಮೆ ಬಡ್ಡಿ ದರ ಹೊಂದಿರುವ ಬೇರೆ ಯಾವುದೇ ಬ್ಯಾಂಕ್‌ಗೆ ವರ್ಗಾಯಿಸಬಹುದು. ಇದಕ್ಕೆ ನೀವು ಬ್ಯಾಂಕ್‌ಗೆ ಲೋನ್ ವರ್ಗಾವಣೆಯ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ಕಡಿಮೆ ಬಡ್ಡಿ ದರ ಪಡೆಯುವ ಮೂಲಕ ನೀವು ಸಾವಿರಾರು ರೂಪಾಯಿ ಉಳಿಸಬಹುದು.

ಈ ಸಂದರ್ಭಗಳಲ್ಲಿ ಲೋನ್ ವರ್ಗಾವಣೆ ಮಾಡಬೇಡಿ
ನಿಮ್ಮ ಲೋನ್‌ನ ಅವಧಿ ಕಡಿಮೆ ಉಳಿದಿದ್ದರೆ, ಲೋನ್ ವರ್ಗಾವಣೆ ಮಾಡುವುದನ್ನು ತಪ್ಪಿಸಿ. ಏಕೆಂದರೆ ಈ ಪ್ರಕ್ರಿಯೆಯು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ನಿಮಗೆ ಹೆಚ್ಚಿನ ಶುಲ್ಕ ಪಾವತಿಸಬೇಕಾಗಿ ಬರಬಹುದು, ಮತ್ತು ಯಾವುದೇ ಉಳಿತಾಯ ಆಗದಿರಬಹುದು.

ಅದೇ ರೀತಿ, ಬೇರೆ ಬ್ಯಾಂಕ್‌ನ ಬಡ್ಡಿ ದರ ಮತ್ತು ನಿಮ್ಮ ಬ್ಯಾಂಕ್‌ನ ಬಡ್ಡಿ ದರಗಳ ನಡುವೆ 0.75% ರಷ್ಟು ವ್ಯತ್ಯಾಸವಿದ್ದರೆ ಮಾತ್ರ ವರ್ಗಾವಣೆ ಬಗ್ಗೆ ಯೋಚಿಸಿ. ಬಡ್ಡಿ ದರಗಳಲ್ಲಿ ಕಡಿಮೆ ವ್ಯತ್ಯಾಸ ಇದ್ದರೆ, ನೀವು ಹೆಚ್ಚು ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ವರ್ಗಾವಣೆ ಶುಲ್ಕದಲ್ಲೇ ಹೆಚ್ಚು ಖರ್ಚಾಗಬಹುದು.

ಹಣದುಬ್ಬರ ಏರಿಕೆಯ ಸಾಧ್ಯತೆ
ಆರ್‌ಬಿಐ ವರದಿಯಂತೆ ಪ್ರಸಕ್ತ ಹಣಕಾಸು ವರ್ಷದಲ್ಲಿ (2025-26) ಹಣದುಬ್ಬರ ಅಂದಾಜು ಏರಿಕೆಯಾಗುವ ಸಾಧ್ಯತೆ ಇದೆ. ಜೂನ್ ತಿಂಗಳಿನಲ್ಲಿ ಹಣದುಬ್ಬರ ಪ್ರಮಾಣ ಶೇ.2.1ಕ್ಕೆ ಇಳಿಕೆಯಾಗಿದೆ. ಇದು 70 ತಿಂಗಳ ಕನಿಷ್ಠ ಮಟ್ಟವಾಗಿದೆ. ತರಕಾರಿ, ಆಹಾರ ಪದಾರ್ಥಗಳ ಬೆಲೆ ಇಳಿಕೆಯಾಗಿರುವುದು ಹಣದುಬ್ಬರ ಇಳಿಕೆಗೆ ಪ್ರಮುಖ ಕಾರಣವಾಗಿದೆ. 2025-26ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ.6.5ರಷ್ಟು ಇರಲಿದೆ ಎಂದು ಅಂದಾಜಿಸಿದೆ.

 

error: Content is protected !!