Nisar Mission: ಭೂ ವೀಕ್ಷಣಾ ಉಪಗ್ರಹ ಸಿಂಥೆಟಿಕ್ ಅಪರ್ಚರ್ ರಾಡಾರ್ (NISAR) ಅನ್ನು ಇಂದು ಇಸ್ರೋ ತನ್ನ GSLV-F16 ರಾಕೆಟ್ ಮೂಲಕ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡುತ್ತಿದೆ.

ಈ ಉಪಗ್ರಹವನ್ನು ಸನ್-ಸಿಂಕ್ರೋನಸ್ ಆರ್ಬಿಟ್‌ನಲ್ಲಿ ಇರಿಸಲಾಗುತ್ತದೆ. ಇದು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಡೆಯುತ್ತಿರುವ 102ನೇ ಉಡಾವಣೆ. ಅಷ್ಟೇ ಅಲ್ಲದೇ, GSLV-F16ರ 18ನೇ ಉಡಾವಣೆಯೂ ಹೌದು. ಸನ್-ಸಿಂಕ್ರೋನಸ್ ಆರ್ಬಿಟ್‌ಗೆ ಹೋಗಲು ಇದು GSLV ರಾಕೆಟ್‌ನ ಮೊದಲ ಯೋಜನೆಯಾಗಿದೆ.

ನಿಸಾರ್ 2,392 ಕೆ.ಜಿ ತೂಕ ಹೊಂದಿದೆ.ಇಸ್ರೋ ಈ ಹಿಂದೆ ರಿಸೋರ್ಸ್‌ಸ್ಯಾಟ್ ಮತ್ತು RISAT ಸೇರಿದಂತೆ ಭೂ ವೀಕ್ಷಣಾ ಉಪಗ್ರಹಗಳನ್ನು ಉಡಾವಣೆ ಮಾಡಿದ್ದರೂ, ಈ ಉಪಗ್ರಹಗಳಿಂದ ಸಂಗ್ರಹಿಸಿದ ದತ್ತಾಂಶ ಭಾರತದ ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು. ಇಸ್ರೋ ಮತ್ತು ನಾಸಾ ಜಂಟಿಯಾಗಿ ಇದೇ ಮೊದಲ ಬಾರಿಗೆ ಇಡೀ ಭೂಮಿಯ ಮೇಲೆ ಕಣ್ಗಾವಲಿಡುವ ಉಪಗ್ರಹದ ಉಡಾವಣೆ ಮಾಡುತ್ತಿವೆ.

ನಿಸಾರ್​ ಪ್ರತಿ 12 ದಿನಗಳಿಗೊಮ್ಮೆ ಭೂ ಮೇಲ್ಮೈ ಮತ್ತು ಹಿಮಾವೃತ ಪ್ರದೇಶಗಳ ಮೇಲ್ಮೈಯನ್ನು ಸ್ಕ್ಯಾನ್ ಮಾಡುತ್ತದೆ. ಇದು ಒಂದು ಸೆಂಟಿಮೀಟರ್ ಮಟ್ಟದವರೆಗೆ ನಿಖರವಾದ ಛಾಯಾಚಿತ್ರಗಳನ್ನು ತೆಗೆದು ಭೂಮಿಗೆ ರವಾನಿಸುವ ಸಾಮರ್ಥ್ಯ ಹೊಂದಿದೆ.

error: Content is protected !!