Doctor Raid; ಮುಂಡಗೋಡ ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಮತ್ತವರ ಟೀಂ “ಏಕದಂ” ಕಾರ್ಯಾಚರಣೆ ನಡೆಸಿದ್ದಾರೆ. ಆಸ್ಪತ್ರೆಯ ಆವರಣದಲ್ಲಿರೋ ಕ್ಯಾಂಟೀನ್ ಹಾಗೂ ಜನೌಷಧಿ ಕೇಂದ್ರದ ಮೇಲೆ ದಾಳಿ ಮಾಡಿ ಬಿಸಿ ಮುಟ್ಟಿಸಿದ್ದಾರೆ.
ಕ್ಯಾಂಟೀನ್ ಮೇಲೆ..!
ಆಸ್ಪತ್ರೆಯ ಆವರಣದಲ್ಲಿರೋ ಕ್ಯಾಂಟೀನ್ ನಲ್ಲಿ ಅಧಿಕಾರಿಗಳ ತಂಡ ದಾಳಿ ಮಾಡಿದಾಗ ಅಲ್ಲಿ ಸ್ವಚ್ಚತೆಯ ಕೊರತೆ ಕಂಡುಬಂದಿದೆ ಎನ್ನಲಾಗಿದೆ. ಅಲ್ದೆ, ಅಸಲೀ ಟೆಂಡರದಾರರನ್ನು ಬಿಟ್ಟು ಬೇರೆಯವರು ಕ್ಯಾಂಟೀನ್ ನಡೆಸುತ್ತಿರುವುದು ಕಂಡು ಬಂದಿದೆಯಂತೆ ಹಾಗೂ ಬೇರೆಯವರ ಫೋನ್ ಪೇ ಸ್ಕ್ಯಾನರ್ ಇರುವುದನ್ನು ಪ್ರಶ್ನೆ ಮಾಡಿ, ಅಸಲೀ ಟೆಂಡರ್ ದಾರರಿಗೆ ನೋಟಿಸ್ ಜಾರಿಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಜನೌಷಧಿ ಕೇಂದ್ರದಲ್ಲೂ ಅಕ್ರಮ..?
ಇನ್ನು ಇದೇ ಆಸ್ಪತ್ರೆ ಆವರಣದಲ್ಲಿರೋ ಜನಔಷಧಿ ಕೇಂದ್ರದಲ್ಲಿಯೂ ಅಕ್ರಮ ನಡೀತಿದೆಯಾ ಅನ್ನೋ ಅನುಮಾನದಲ್ಲಿ ದಾಳಿ ಮಾಡಿದ ಅಧಿಕಾರಿಗಳಿಗೆ, ಜನೌಷಧಿ ಕೇಂದ್ರದಲ್ಲಿ ಬ್ರಾಂಡೆಡ್ ಔಷಧಿ ಇರುವುದು ಪತ್ತೆಯಾಗಿದೆ. ಹೀಗಾಗಿ, ಸಂಬಂಧಪಟ್ಟವರಿಗೆ ನೋಟಿಸ್ ನೀಡಲು ತಿಳಿಸಿದ್ದಾರೆ ಎನ್ನಲಾಗಿದೆ.
ಸಾರ್ವಜನಿಕರಿಂದ ದೂರು..!
ಅಸಲು, ಮುಂಡಗೋಡ ತಾಲೂಕಾಸ್ಪತ್ರೆಯ ಆವರಣದಲ್ಲಿನ ಕ್ಯಾಂಟೀನ್ ಹಾಗೂ ಜನೌಷಧಿ ಕೇಂದ್ರದ ವಿರುದ್ಧ ಸಾರ್ವಜನಿಕರು ದೂರು ನೀಡಿದ್ದರು ಎನ್ನಲಾಗಿದ್ದು, ಆ ಹಿನ್ನೆಲೆಯಲ್ಲೇ ಅಧಿಕಾರಿಗಳು ಇಂತಹದ್ದೊಂದು ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ದಾಳಿಯ ಕುರಿತು ಮೇಲಧಿಕಾರಿಗಳಿಗೆ ವರದಿ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ👉ಕಳೆನಾಶಕ ಸೇವಿಸಿದ್ದ (ಕೊಪ್ಪ) ಇಂದಿರಾನಗರದ ವ್ಯಕ್ತಿ ಸಾವು..!