Three Farmers Death; ಯಾದಗಿರಿ;ಮೋಟಾರ್ ಪಂಪ್ ಸೆಟ್ ರಿಪೇರಿ ವೇಳೆ ವಿದ್ಯುತ್ ತಂತಿ ತಗುಲಿ‌ ಮೂವರು ರೈತರು ಸಾವು ಕಂಡಿರೋ ಘಟನೆ,
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗತೀರ್ಥ ಗ್ರಾಮದಲ್ಲಿ ನಡೆದಿದೆ.

ಈರಪ್ಪ(40) ದೇವು(30) ಸುರೇಶ್(22) ಎಂಬುವ ರೈತರು, ಮೋಟಾರ್ ಪಂಪ್ ಸೆಟ್ ರಿಪೇರಿ ವೇಳೆ ವಿದ್ಯುತ್ ತಗುಲಿ ಸಾವು ಕಂಡ ರೈತರಾಗಿದ್ದಾರೆ. ಮೂವರು ಸದಬ ಗ್ರಾಮದ ದುರ್ದೈವಿಗಳು ಎನ್ನಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೃತದೇಹ ರವಾನೆ ಮಾಡಲಾಗಿದೆ.

ಕೆಂಭಾವಿ ಸಮುದಾಯ ಆಸ್ಪತ್ರೆ ಮುಂಭಾಗದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ👉ಇಂದಿನಿಂದ “ಮನೆ ಮನೆಗೆ ಪೊಲೀಸ್” ವಿನೂತನ ಕಾರ್ಯಕ್ರಮಕ್ಕೆ ಚಾಲನೆ..! ನಿಮ್ಮನೆಗೇ ಬಂದು ನಿಮ್ಮ ದೂರು ಆಲಿಸಲಿದ್ದಾರೆ ಪೊಲೀಸ್ರು..!