SP Suddenly Transferred;ಕಾರವಾರ : ಉತ್ತರ ಕನ್ನಡದಲ್ಲಿ ಅಕ್ರಮಿಗಳಿಗೆ ನಡುಕ‌ ಹುಟ್ಟಿಸಿದ್ದ ಎಸ್ಪಿ ಎಂ ನಾರಾಯಣ್ ವರ್ಗಾವಣೆ ಆಗಿದೆ. ಕಳೆದ ಒಂದು ವರ್ಷದಿಂದ ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ನಾರಾಯಣ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿ ಸರಕಾರ ಆದೇಶಿಸಿದೆ.

ಇನ್ನು ಉತ್ತರ ಕನ್ನಡ ಜಿಲ್ಲೆಯ ನೂತನ ಎಸ್ಪಿಯಾಗಿ ದೀಪನ್ ಎಂಎನ್, ಐಪಿಎಸ್ (ಕೆಎನ್ 2019) ಅವರನ್ನ ನೇಮಕ ಮಾಡಲಾಗಿದೆ.

ಎಂ ನಾರಾಯಣ ಅವರು ಉತ್ತರ ಕನ್ನಡಕ್ಕೆ ಎಸ್ಪಿ ಆಗಿ ನೇಮಕವಾಗಿ ಬಂದಾಗಿನಿಂದ ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನರಾಗಿದ್ದರು. ಜಿಲ್ಲೆಯಲ್ಲಿ ನಡೆಯುತ್ತಿದ್ದ ಹಲವು ಅಕ್ರಮಗಳಿಗೆ ಕಡಿವಾಣ ಹಾಕಿದ್ದರು. ಹೀಗಾಗಿ, ಕೆಲ ದಂಧೆಕೋರರು ಎಸ್ಪಿಯವರ ವರ್ಗಾವಣೆಗಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ಕಡೆಗೂ ಸರ್ಕಾರ ಒಂದೇ ವರ್ಷದಲ್ಲಿ ಖಡಕ್ ಅಧಿಕಾರಿಯನ್ನು ವರ್ಗಾವಣೆ ಮಾಡಿದೆ.

error: Content is protected !!