Road Problem; ಮುಂಡಗೋಡ ತಾಲೂಕಿನ ಹುನಗುಂದದ ವಡಗಟ್ಟಾ ರಸ್ತೆ ಗೋಳು ಕೇಳುವವರೇ ಇಲ್ಲವೆನೊ..? ಯಾಕಂದ್ರೆ ಗ್ರಾಮದ ವಿರಕ್ತ ಮಠದ ಹತ್ತಿರ, ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ಹತ್ತಿರ ರಸ್ತೆ ಅನ್ನೋದು ಹೊಂಡ ಮಯವಾಗಿದೆ. ವಾಹನಗಳಿರಲಿ, ಇಲ್ಲಿ ನಡೆದಾಡಲೂ ಆಗದ ಸ್ಥಿತಿ ಇದೆ. ಆದ್ರೆ, PWD ಅಧಿಕಾರಿಗಳು ಮಾತ್ರ ಈ ಕಡೆ ತಿರುಗಿಯೂ ನೋಡಿಲ್ಲ.
ನೀವು, ಹುನಗುಂದ ಗ್ರಾಮಕ್ಕೆ ಬಂದಿದ್ದರೆ, ಗ್ರಾಮ ಪಂಚಾಯತಿಯ ಎದುರಿನ ವಡಗಟ್ಟಾ ರಸ್ತೆಗೆ ಬರಬೇಕು, ಅಸಲು, ಇಲ್ಲಿ ಕಾಂಕ್ರೀಟ್ ರಸ್ತೆ ಇದೆ. ಅದ್ರಿಂದ ಹಾಗೇ, ಮುಂದೆ ಬಂದ್ರೆ ಅಲ್ಲಿ ವಿರಕ್ತ ಮಠದ ಪಕ್ಕದ ರಸ್ತೆ ಸಂಪೂರ್ಣ ಗುಂಡಿ ಬಿದ್ದಿದೆ. ಮಳೆಗಾಲವಾದ್ರಿಂದ ಗುಂಡಿಯಲ್ಲಿ ನೀರು ತುಂಬಿ ಅಕ್ಷರಶಃ ಕೆರೆಯಂತಾಗಿದೆ. ಈ ಬಗ್ಗೆ ಅದೇಷ್ಟು ಸಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾರೂ ಕ್ಯಾರೇ ಅಂದಿಲ್ಲ ಅನ್ನೋದು ಗ್ರಾಮಸ್ಥರ ಆಕ್ರೋಶವಾಗಿದೆ.
ಗುಂಡಿಯಾದ್ರೂ ಮುಚ್ಚಬೇಕಲ್ವಾ..?
ಈ ಲೋಕೋಪಯೋಗಿ ಅಧಿಕಾರಿಗಳಿಗೆ ಇವೇಲ್ಲ ಬಹುಶಃ ಕಣ್ಣಿಗೆ ಕಂಡಿಲ್ಲ ಅನಿಸತ್ತೆ. ಭಾರೀ ಪ್ರಮಾಣದ ಗುಂಡಿಗಳು ಬಿದ್ದು ವಾಹನ ಸವಾರರು ಇಲ್ಲಿ ಜೀವ ಅಂಗೈಯಲ್ಲಿ ಹಿಡಿದು ವಾಹನ ಚಲಾಯಿಸುವಂತಾಗಿದೆ. ಇಷ್ಟೇಲ್ಲ ಆದ್ರೂ ಜಸ್ಟ್ ಅಂತಹ ರಸ್ತೆ ಗುಂಡಿಗಳನ್ನು ಒಂದಿಷ್ಟು ಮುಚ್ಚುವ ಕೆಲಸವನ್ನಾದ್ರೂ ಮಾಡಬೇಕಿತ್ತು ಅಲ್ವಾ..? ಆದ್ರೆ, ಅದೇಲ್ಲ ನಮ್ಮಮುಂಡಗೋಡಿನ PWD ಅಧಿಕಾರಿಗಳಿಗೆ ಅರ್ಥೈಸುವವರು ಯಾರು..?
PDO ಸಾಹೇಬ್ರಿಗೆ ಇದೇಲ್ಲ ಕಾಣಲ್ಲ..!
ಹುನಗುಂದದ ಗ್ರಾಮ ಪಂಚಾಯತಿಯವರಿಗೆ ಹೇಳೋಣವೆಂದ್ರೆ ಪಾಪ PDO ಸಾಹೇಬ್ರಿಗೆ ಇಂತವುಗಳನ್ನೇಲ್ಲ ಗಮನಿಸಲು ಪುರುಸೋತ್ತೇ ಇಲ್ಲ. ಅಷ್ಟಕ್ಕೂ ಇವ್ರಿಗೆ ಹೇಳೋದೂ ಕೂಡ ಒಂದರ್ಥದಲ್ಲಿ ವೇಸ್ಟೇ.. ಯಾಕಂದ್ರೆ, PDO ಸಾಹೇಬ್ರ ಹತ್ರ ನಮ್ಮದೇನಾದ್ರೂ ಸಮಸ್ಯೆ ಬಗೆಹರಿಸಿಕೊಳ್ಳಬೇಕಂದ್ರೆ ನಾವು ಜಿಲ್ಲಾಧಿಕಾರಿಗಳ ಮೂಲಕವೇ ಹೇಳಿಸಬೇಕು. ಅಂದಾಗ ಮಾತ್ರ ಕೆಲಸಗಳು ಆಗತ್ತೆ. ಇಲ್ಲವಾದಲ್ಲಿ, PDO ಸಾಹೇಬ್ರು ಯಾವುದಕ್ಕೂ ತಲೆಕೆಡಿಸಿಕೊಳ್ಳೋದೇ ಇಲ್ಲ. ಹೀಗಾಗಿ, ಹುನಗುಂದದ ಸಮಸ್ಯೆಗಳನ್ನು ಯಾರ ಹತ್ರ ಹೇಳಿಕೊಳ್ಳೊದು ಅನ್ನೋ ಪ್ರಶ್ನೆ ಎದುರಾಗಿದೆ.