Mundgod Police News; ಮುಂಡಗೋಡಿನ ಕ್ರೈಂ ಪಿಎಸ್ಐ ವಿನೋದ್ ರೆಡ್ಡಿ ನೇತೃತ್ವದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ ಅನ್ನೊ ಮಾಹಿತಿ ಲಭ್ಯವಾಗಿದೆ, ಮುಂಡಗೋಡ ತಾಲೂಕಿನ ತೆಗ್ಗಿನಕೊಪ್ಪದ ಬಳಿ, ಅಕ್ರಮವಾಗಿ ಹುಟ್ಟಿಕೊಂಡಿದ್ದ ಇಸ್ಪೀಟು ಅಡ್ಡೆಯ ಮೇಲೆ ದಾಳಿ ನಡೆಸಿ, ಏನಿಲ್ಲವೆಂದರೂ 6 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿರೋ ಮಾಹಿತಿ ಲಭ್ಯವಾಗ್ತಿದೆ. ಏನಿಲ್ಲವೆಂದರೂ ಎರಡೂವರೇ ಲಕ್ಷಕ್ಕೂ ಹೆಚ್ಚು ಹಣವನ್ನು ಜಪ್ತಿ ಮಾಡಿದ್ದಾರೆ ಅನ್ನೋ ಮಾಹಿತಿ ಇದೆ. ಶಿರಸಿ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ನಡೆದಿರೋ ದಾಳಿ ಎನ್ನಲಾಗಿದ್ದು, ಈ ಕ್ಷಣಕ್ಕೂ ಯಾವುದೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಅಸಲು, ಆ ಇಸ್ಪೀಟು ಅಡ್ಡೆಯಲ್ಲಿ 20 ಕ್ಕೂ ಹೆಚ್ಚು ಜನ ಆಟದಲ್ಲಿ ಬ್ಯುಸಿಯಾಗಿದ್ರಂತೆ, ಇದೇ ವೇಳೆ ಖಚಿತ ಮಾಹಿತಿ ಆಧಾರದಲ್ಲಿ ದಾಳಿ ಮಾಡಿರೋ ಕ್ರೈಂ ಟೀಂ ಎರಡೂವರೇ ಲಕ್ಷ ಹಣ, 10ಕ್ಕೂ ಹೆಚ್ಚು ಬೈಕ್, ಒಂದು ಕಾರ್ ಸೇರಿದಂತೆ ಕೆಲ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಟಿಬೇಟಿಯನ್ ಕ್ಯಾಂಪ್ ನಂಬರ್ 1 ರ ಸಮೀಪ, ತೆಗ್ಗಿನಕೊಪ್ಪದ ಬಳಿ ಇರುವ ಸಿಮೆಂಟ್ ಬ್ಲಾಕ್ ತಯಾರಿಕಾ ಘಟಕದ ಹತ್ತಿರ ಇಂತಹದ್ದೊಂದು ದಾಳಿ ನಡೆದಿದೆ. ಯಾರ ಭಯವೂ ಇಲ್ಲದೇ ಅಂದರ್ ಬಾಹರ್ ನಲ್ಲಿ ತೊಡಗಿದ್ದವರ ಛಳಿ ಬಿಡಿಸಿದ್ದಾರೆ ಪೊಲೀಸರು. ದಾಳಿ ವೇಳೆ ಹಲವರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಉತ್ತರ ಕನ್ನಡ ಎಸ್ಪಿ, ನಾರಾಯಣ್ ಎಂ, ಶಿರಸಿ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ್ ಮಾರ್ಗದರ್ಶನದಲ್ಲಿ, ಮುಂಡಗೋಡ ಪಿಐ ರಂಗನಾಥ್ ನೀಲಮ್ಮನವರ್, ಪಿಎಸ್ಐ ಪರಶುರಾಮ್ ಮಿರ್ಜಿಗಿ ದೇಖರೇಕಿಯಲ್ಲಿ ಕ್ರೈಂ ಪಿಎಸ್ಐ ವಿನೋದ್ ರೆಡ್ಡಿ ನೇತೃತ್ವದ ಟೀಂ ಈ ದಾಳಿ ಮಾಡಿದೆ ಎನ್ನಲಾಗಿದೆ.