ಮುಂಡಗೋಡಿನ ಇಂದಿರಾನಗರ ಬಳಿ ಬೈಕ್ ಅಪಘಾತ, ಇಂದೂರಿನ ವ್ಯಕ್ತಿಗೆ ಗಂಭೀರ ಗಾಯ..!

Bike Accident; ಮುಂಡಗೋಡ ತಾಲೂಕಿನ ಇಂದಿರಾನಗರ ಬಳಿ ಬೈಕ್ ಅಪಘಾತವಾಗಿದೆ. ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣವೇ ಅಂಬುಲೆನ್ಸ್ ಗೆ ಕರೆ‌ಮಾಡಿದ್ರೂ ಅಂಬುಲೆನ್ಸ್ ದೊರೆಯದ ಹಿನ್ನೆಲೆಯಲ್ಲಿ ಟಾಟಾ ಎಸ್ ವಾಹನದಲ್ಲಿ ಗಾಯಾಳುವನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ.

ಅಂದಹಾಗೆ, ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಇಂದೂರು ಗ್ರಾಮದವನು ಅನ್ನೋ ಮಾಹಿತಿ ಲಭ್ಯವಾಗಿದೆ. ಆದ್ರೆ, ಹೆಸರು ತಿಳಿದುಬಂದಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!