Khanapur Forest Crime;
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡಾ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಒಂದು ಕಡವೆ ಬೇಟೆಯಾಡಿದ್ದ 9 ಜನ ಆರೋಪಿಗಳು ಅಂದರ್ ಆಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಖಾನಾಪುರ ಎಸಿಎಫ್ ಸುನೀತಾ ನಿಂಬರಗಿ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳು ದಾಳೊ ನಡೆಸಿ, 9 ಜನ ಆರೋಪಿಗಳ ಬಂಧನವಾಗಿದೆ.
Khanapur Forest Crime; ಖಾನಾಪುರ ತಾಲೂಕಿನ ನೇರಸೆ ಗ್ರಾಮದ ರಂಜಿತ್ ದೇಸಾಯಿ, ಬಲವಂತ ದೇಸಾಯಿ, ಆತ್ಮರಾಮ್ ದೇವಳಿ, ಪ್ರಮೋದ್ ದೇಸಾಯಿ, ದತ್ತರಾಜ್ ಹವಾಲ್ದಾರ್, ಜ್ಞಾನೇಶ ಗಾವಡೆ, ಗೋವಿಂದ ದೇಸಾಯಿ, ಅಪ್ಪಿ ಹಣಬರ, ಬರಮಪ್ಪ ಹಣಬರ ಬಂಧಿತ ಆರೋಪಿಗಳು.
ಬಂಧಿತರಿಂದ ಎರಡು ಬಂದೂಕು, ಒಂದು ಕುಡಗೋಲು, ಕಡವೆ ಮಾಂಸ ಜಪ್ತಿ ಪಡಿಸಿಕೊಳ್ಳಲಾಗಿದೆ. ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕೇಸ್ ದಾಖಲು ಮಾಡಲಾಗಿದೆ. ಬಂಧಿತರನ್ನ ಅರಣ್ಯ ಇಲಾಖೆ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.