Crime News; ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಮಹಿಳೆಯನ್ನು, ಯಲ್ಲಾಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ತಾಲೂಕಿನ ಮದನೂರು ಗ್ರಾಮದ ಗೌಳಿವಾಡ ಹತ್ತಿರದ ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸಗ್ಗಿ ಬಾಬು ಪಾಟೀಲ್ (40) ಎಂಬುವಳೇ ಬಂಧಿತ ಮಹಿಳೆಯಾಗಿದ್ದಾಳೆ.
ಖಚಿತ ಬಾತ್ಮೀ ಆಧಾರದಲ್ಲಿ, ಮೇಲಾಧಿಕಾರಿಯವರ ಮಾರ್ಗದರ್ಶನದಂತೆ ಯಲ್ಲಾಪುರ ಪೊಲೀಸ ಉಪನಿರೀಕ್ಷಕ ಮಹಾವೀರ ಕಾಂಭೈರವರು ಠಾಣೆಯ ಸಿಬ್ಬಂದಿಯವರೊಂದಿಗೆ ಮದನೂರು ಗ್ರಾಮಕ್ಕೆ ಹೋಗಿ ದಾಳಿ ನಡೆಸಿದ್ದಾರೆ.
ಬಂಧಿತ ಆರೋಪಿಯಿಂದ 10 ಸಾವಿರ ರೂ. ಮೌಲ್ಯದ, 340 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.