Lorry accident; ಮುಂಡಗೋಡ ತಾಲೂಕಿನ ಗಡಿ ಭಾಗದ, ತಡಸ ಸಮೀಪದ ಹುಬ್ಬಳ್ಳಿ ರಸ್ತೆಯಲ್ಲಿ, ಲಾರಿಯೊಂದು ಅಪಘಾತವಾಗಿ ಬಿದ್ದಿದೆ. ಹೀಗಾಗಿ, ಮುಂಡಗೋಡ- ಹುಬ್ಬಳ್ಳಿ ರಸ್ತೆ ಸಂಚಾರ ಬಂದ್ ಆಗಿದೆ. ಕನಿಷ್ಟ ಎರಡರಿಂದ ಮೂರು ಗಂಟೆಗಳ ಸಂಚಾರ ಸ್ಥಗಿತವಾಗುವ ಸಾಧ್ಯತೆ ಇದೆ.
ಹುಬ್ಬಳ್ಳಿ ರಸ್ತೆಯ ತಾಯವ್ವನ ದೇವಸ್ಥಾನದ ಸಮೀಪ ಲಾರಿ ಅಪಘಾತವಾಗಿ ಅಕ್ಷರಶಃ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಹೀಗಾಗಿ, ರಸ್ತೆಯಲ್ಲಿ ವಾಹಮ ಸಂಚಾರಕ್ಕೆ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಪೊಲೀಸರು ಶಿರಸಿಯಿಂದ ಹುಬ್ಬಳ್ಳಿಯೆಡೆಗೆ ಸಂಚರಿಸುವ ವಾಹನಗಳನ್ನು ಬಂಕಾಪುರ ರಸ್ತೆ ಮಾರ್ಗವಾಗಿ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಿಸುತ್ತಿದ್ದಾರೆ.
ಇದನ್ನೂ ಓದಿ👇
ಅಬ್ಬಾ..! ಶಿರಸಿ ಶೈಕ್ಷಣಿಕ ಜಿಲ್ಲೆಯ DDPI ಬಸವರಾಜ್ ಎತ್ತಂಗಡಿ..! ಹೊಸ DDPI ಆಗಿ ಬಂದ್ರು ಡಿ. ಆರ್. ನಾಯ್ಕ್..!