Accident News; ಮುಂಡಗೋಡ ಪಟ್ಟಣದ ಜಂಬಗಿ ಆಸ್ಪತ್ರೆಯ ಪಕ್ಕದ ಹಣ್ಣಿನ ಅಂಗಡಿಗೆ ಟವೆರಾ ವಾಹನವೊಂದು ಏಕಾಏಕಿ‌ನುಗ್ಗಿ ಹಾನಿಗೊಳಿಸಿದೆ. ಈಗ್ಗೆ ಕಲವೇ ನಿಮಿಷಗಳ ಹಿಂದೆ ನಡೆದಿರೋ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ, ಬದಲಾಗಿ ಒಂದು ಬೈಕ್ ಜಖಂಗೊಂಡಿದೆ. ಹಣ್ಣಿನ ಅಂಗಡಿಯಂತೂ ಚೆಲ್ಲಾಪಿಲ್ಲಿಯಾಗಿದೆ.

KA – 25 ನೋಂದಣಿಯ ಟವೇರಾ ವಾಹನ ಏಕಾಏಕಿ ಹಣ್ಣಿನ ಅಂಗಡಿಗೆ ವೇಗವಾಗಿ ಬಂದು ನುಗ್ಗಿದೆ. ಪುಣ್ಯಕ್ಕೆ ಅಲ್ಲೇ ಇದ್ದ ಹಣ್ಣಿನ ವ್ಯಾಪಾರಿಗೆ ಏನೂ ಆಗಿಲ್ಲ. ಆದ್ರೆ, ಅದಕ್ಕೂ‌ ಮೊದಲು ಅಲ್ಲೇ ಇದ್ದ ಬೈಕ್ ಗೆ ವಾಹನ ಗುದ್ದಿದ ಪರಿಣಾಮ ಬೈಕ್ ಜಖಂ ಗೊಂಡಿದೆ.

ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!