Lokayukta raid; ಗದಗ ಶಹರ ಠಾಣೆ ಪಿಐ ಡಿ.ಬಿ.ಪಾಟೀಲ್ ಗೆ ಲೋಕಾತುಕ್ತರು ಬಿಸಿ ಮುಟ್ಟಿಸಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಕೆಯ ಆರೋಪದಲ್ಲಿ ರೇಡ್ ಮಾಡಲಾಗಿದ್ದು, ಬೆಳ್ಳಂ ಬೆಳಿಗ್ಗೆ ಬ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲಾಗಿದೆ.
ಗದಗ ಶಹರ ಪೊಲೀಸ್ ಠಾಣೆ ಸಿಪಿಐ ಡಿ ಬಿ ಪಾಟೀಲ್ ಮನೆ ದಾಳಿ ನಡದಿದ್ದು, ಪಾಟೀಲ್ ಗೆ ಸೇರಿದ ಏಳು ಜಾಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
Lokayukta raid; ಗದಗಿನ ಶಿವಾನಂದ ನಗರದ ಬಾಡಿಗೆ ಮನೆ ಹಾಗೂ ಗದಗ ಶಹರ ಪೊಲೀಸ್ ಠಾಣೆಯ ಕಚೇರಿ ಮೇಲೆ ದಾಳಿ ನಡೆಸಲಾಗಿದ್ದು, ಸಿಪಿಐ ಡಿ ಬಿ ಪಾಟೀಲ್ ಗೆ ಸೇರಿದ ಬಾಗಲಕೋಟೆ, ಜಮಖಂಡಿ, ಕೆರೂರು ಮನೆಗಳ ಮೇಲೂ ದಾಳಿ ನಡೆದಿದೆ.
ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ, ಪಿ ಎಸ್ ಪಾಟೀಲ, ಲೋಕಾ ಸಿಪಿಐ ಪರಶುರಾಮ ಕವಟಗಿ ನೇತೃತ್ವದಲ್ಲಿ ದಾಳಿ ನಡೆದಿದೆ.