Accident News; ಮುಂಡಗೋಡ ತಾಲೂಕಿನ ಪಾಳಾ ಹಾಗೂ ಸಿಂಗನಳ್ಳಿ ನಡುವೆ ಶಿರಸಿ ರಸ್ತೆಯಲ್ಲಿ, ಕಾರ್ ಅಪಘಾತವಾಗಿದೆ. ಸಿಂಗನಳ್ಳಿ ಬಳಿಯ ರಸ್ತೆ ಪಕ್ಕದ ಹಳ್ಳಕ್ಕೆ ಕಾರ್ ಬಿದ್ದಿದ್ದು, ಓರ್ವನಿಗೆ ಗಾಯವಾಗಿದೆ ಅನ್ನೋ ಮಾಹಿತಿ ಬಂದಿದೆ.
ಮುಂಡಗೋಡ ಪೊಲೀಸರ ಮಾಹಿತಿ ಪ್ರಕಾರ, ಕಾರಿನಲ್ಲಿದ್ದವರು ರಾಣೆಬೆನ್ನೂರು ಮೂಲದವರು ಎನ್ನಲಾಗಿದ್ದು, ಕುಡಿದು ವಾಹನ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಹೀಗಾಗಿ, ವೇಗವಾಗಿ ಚಲಾಯಿಸುತ್ತಿದ್ದ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿದೆ ಎನ್ನಲಾಗಿದೆ. ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಅದ್ರಲ್ಲಿ ಓರ್ವನಿಗೆ ಗಾಯವಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.