ಮುಂಡಗೋಡ ಪಟ್ಟಣದ ಬಸವನ ಹೊಂಡದಲ್ಲಿ ಆತ್ನಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಸ್ಥಳೀಯರ ಸಮಯಪ್ರಜ್ಞೆಯಿಂದ ರಕ್ಷಣೆ ಮಾಡಲಾಗಿತ್ತು. ಆದ್ರೂ ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು, ದುರಂತ ಅಂದ್ರೆ, ಅದೇಷ್ಟೇ ಚಿಕಿತ್ಸೆ ನೀಡಿದ್ರೂ ಮಹಿಳೆ ಬದುಕುಳಿಯಲಿಲ್ಲ.
ಅಂದಹಾಗೆ, ಮುಂಡಗೋಡ ಅಂಬೇಡ್ಲರ ಓಣಿಯ ರುಕ್ಮೀಣಿ ವಡ್ಡರ್ ಎನ್ನುವ 45 ವರ್ಷದ ಮಹಿಳೆ, ಮಂಗಳವಾರ ಬೆಳಿಗ್ಗೆ ಅದ್ಯಾವುದೋ ಕಾರಣಕ್ಕೆ ಮನನೊಂದು ಬಸವನ ಹೊಂಡಕ್ಕೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಹೀಗಾಗಿ ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪಿಎಸ್ಐ ಹಾಗೂ ಪೊಲೀಸರು ಮಹಿಳೆಯನ್ನು ಹೊಂಡದಿಂದ ಮೇಲಕ್ಕೇತ್ತಿ ಬಚಾವ್ ಮಾಡಿದ್ದಾರೆ. ಆದ್ರೆ, ತೀರ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕಿತ್ಸೆ ನೀಡಲು ಪ್ರಯತ್ನಿಸಲಾಗಿದೆ. ಆದ್ರೂ ಮಹಿಳೆ ಪ್ರಾಣ ಉಳಿದಿಲ್ಲ.