ಪಾಳಾದಲ್ಲಿ ನಿರಂತರ ಮಳೆ ಮನೆ ಮೇಲೆ ಬಿದ್ದ ಮರ, ಇಬ್ಬರಿಗೆ ಸಣ್ಣಪುಟ್ಟ ಗಾಯ, ಮನೆಗೆ ಹಾನಿ..!


ಮುಂಡಗೋಡ ತಾಲೂಕಿನಲ್ಲಿ ಮಳೆಯ ಅವಾಂತರಗಳು ಶುರುವಾಗಿವೆ. ಪಾಳಾ ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಮಳೆ, ಗಾಳಿಯಿಂದ ಮನೆಯ ಮೇಲೆ ಮರ ಬಿದ್ದು ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಮನೆಗೆ ಹಾನಿಯಾಗಿದೆ.

ಧಾರಾಕಾರ ಮಳೆ ಮತ್ತು ಗಾಳಿಯಿಂದ ಬದ್ರಾಪುರದ ಹೊಸನಗರದಲ್ಲಿ ರಜಿಯಾ ಖಾಸಿಂಸಾಬ್ ಶೇಕ್ ಎಂಬುವರ ಮನೆ ಮೇಲೆ, ಮನೆ ಪಕ್ಕದಲ್ಲಿ ಇದ್ದ ಬೃಹತ್ ಗಾತ್ರದ ಮರ ಬಿದ್ದಿದೆ. ಮನೆ ಮೇಲೆ ಬಿದ್ದು ಹಾನಿಯಾಗಿದೆ. ಮನೆಯಲ್ಲಿದ್ದ ರಜಿಯಾ ಬೇಗಂ ಮತ್ತು ಮಗನಾದ ಮಕ್ಬುಲ್ ಅಹಮದ್ ಶೇಕ್ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ.

ಹೀಗಾಗಿ, ಘಟನೆ ನಡೆದ ಬಳಿಕ ತಡರಾತ್ರಿ ಮನೆಯಲ್ಲಿದ್ದ ಎಲ್ಲರನ್ನೂ ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ.

error: Content is protected !!