ಮಾಜಿ ಸಚಿವ ಬಿ.ಸಿ.ಪಾಟೀಲ್ ಅಳಿಯ ಆತ್ಮಹತ್ಯೆಗೆ ಶರಣು..!

ಹಿರೇಕೆರೂರಿನ, ಮಾಜಿ ಸಚಿವ ಬಿಸಿ ಪಾಟೀಲ್‌ ಅಳಿಯ ಪ್ರತಾಪಕುಮಾರ ಕೆಜಿ (41) ವಿಷ ಸೇವಿಸಿ ಆತ್ಯಹತ್ಯೆಗೆ ಶರಣಾಗಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರ್ ನಲ್ಲಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರತಾಪಕುಮಾರನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎನ್ನಲಾಗಿದೆ. ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

* ಮಾಜಿ ಸಚಿವ ಬಿ.ಸಿ.ಪಾಟೀಲ್ ಅಳಿಯ ಆತ್ಮಹತ್ಯೆ ಪ್ರಕರಣ.
* ದಾವಣಗೆರೆ ತಾಲೂಕಿನ ಕತ್ತಲಗೇರಿ ಗ್ರಾಮದ ನಿವಾಸಿ.
* ಕಳೆದ 12 ವರ್ಷಗಳ ಹಿಂದೆ ಬಿ.ಸಿ.ಪಾಟೀಲ್ ಮಗಳ ಜೊತೆಗೆ ಮದುವೆ.
* ಬಿ.ಸಿ.ಪಾಟೀಲ್ ಹಿರಿಯ ಪುತ್ರಿ ಸೌಮ್ಯಳನ್ನ ಮದುವೆಯಾಗಿದ್ದ ಪ್ರತಾಪಕುಮಾರ ಕೆ.ಜಿ.
* ವಿಶೇಷಚೇತನಾಳಗಿದ್ದ ಸೌಮ್ಯಳನ್ನ ಮದುವೆ ಆಗಿದ್ದ ಪ್ರತಾಮಕುಮಾರ ಕೆ.ಜಿ.
* ಬಿ.ಸಿ.ಪಾಟೀಲ್ ಮನೆಯ ಅಳಿಯನಾಗಿ, ಕೃಷಿಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದ.
* ಬಿ.ಸಿ.ಪಾಟೀಲ್ ಅವರ ರಾಜಕೀಯ ಕೆಲಸಗಳನ್ನ ನಿರ್ವಹಣೆ ಮಾಡ್ತಾ ಇದ್ದ.
* ಮದುವೆ ಆದ ನಂತ್ರ ಹಿರೇಕೆರೂರನಲ್ಲಿ ವಾಸವಿದ್ದ ಪ್ರತಾಮಕುಮಾರ ಕೆ.ಜಿ.
* ಅಳಿಯ ಸಾವಿನ ಸುದ್ದಿ ತಿಳಿದು ಶಿವಮೊಗ್ಗಕ್ಕೆ ತೆರಳಿದ ಬಿ.ಸಿ.ಪಾಟೀಲ್.
* ಹಿರೇಕೆರೂರಿನ ಬಿ.ಸಿ.ಪಾಟೀಲ್ ನಿವಾಸದಲ್ಲಿ ನೀರವ ಮೌನ.

error: Content is protected !!