ವಿಜಯಪುರ: ಅಂದರ್ ಬಾಹರ್ ಇಸ್ಪೀಟ್ ಆಡುವಾಗ ಪೊಲೀಸರ ದಾಳಿ ಹಿನ್ನೆಲೆಯಲ್ಲಿ, ನದಿಯಲ್ಲಿ ತೆಪ್ಪದ ಮೂಲಕ ಎಸ್ಕೇಪ್ ಆಗುವಾಗ ತೆಪ್ಪ ಮುಗುಚಿಬಿದ್ದ ಪರಿಣಾಮ 8 ಜನರು ನೀರುಪಾಲಾಗಿದ್ದರು, ಆ ಎಂಟು ಜನರ ಪೈಕಿ ಇಬ್ಬರು ಪಾರಾಗಿದ್ದಾರೆ. ಓರ್ವನ ಮೃತ ದೇಹ ಪತ್ತೆಯಾಗಿದೆ. ಇದ್ರೊಂದಿಗೆ ಐವರು ನೀರು ಪಾಲಾಗಿದ್ದಾರೆ.
ಪುಂಡಲಿಕ್ ಮಲ್ಲಪ್ಪ ಯಂಕಂಚಿ (36) ಮೃತದೇಹ ನಿನ್ನೆ ಪತ್ತೆಯಾಗಿದೆ. ದಶರಥ( 58), ಮೈಬೂಬ್ ವಾಲಿಕಾರ(35), ತೈಯುಬ್ ಚೌಧರಿ ( 45), ರಫೀಕ್ ಬಾಂಬೆ (40), ರಫೀಕ ಜಾಲಗಾರ (48) ನೀರು ಪಾಲಾದವರಾಗಿದ್ದಾರೆ. ಸಚಿನ್ ಕಟಬರ್, ಫಾರೂಕ್ ಅಹ್ಮದ್ ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಿಗ್ಗೆಯಿಂದಲೇ ಎಸ್ ಡಿ ಆರ್ ಎಫ್, ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ನಡೆದಿದೆ.