ಮುಂಡಗೋಡ ತಾಲೂಕಿನಲ್ಲಿ ಭಾರಿ ಮಳೆ ಗಾಳಿಗೆ ಅವಾಂತರ, ಸಿಡಿಲಿನ ಅರ್ಭಟಕ್ಕೆ ಮರಕ್ಕೆ ಬೆಂಕಿ, ಧರೆಗುರುಳಿದ ಮರಗಳು, ರಸ್ತೆ ಬಂದ್..!




ಮುಂಡಗೋಡ ತಾಲೂಕಿನಾಧ್ಯಂತ ಭಾರೀ ಮಳೆಯಾಗಿದೆ. ಬಿರುಗಾಳಿ ಸಮೇತ ಒನಮದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ಅಲ್ಲಿ ಅನಾಹುತಗಳಾಗಿವೆ. ಮಳೆ ಗಾಳಿಗೆ ಹಲವು ಕಡೆ ಮರಗಳು ಧರೆಗುರುಳಿವೆ ಪರಿಣಾಮ ಕೆಲವು ರಸ್ತೆ ಸಂಚಾರಕ್ಕೂ ಅಡಚಣೆಯಾಗಿದೆ.

ರಸ್ತೆ ಬಂದ್..!
ಮುಂಡಗೋಡ ಕಲಘಟಗಿ ರಸ್ತೆಯಲ್ಲಿ ಮಳೆಗಾಳಿಗೆ ಎರಡು ಕಡೆ ಮರಗಳು ನೆಲಕ್ಕುರುಳಿದ್ದು ಕೆಲಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಅದ್ರಂತೆ, ಮುಂಡಗೋಡ ಪಟ್ಟಣದ ಹಲವು ಕಡೆ ಮರಗಳು ಧರೆಗುರುಳಿದೆ. ಹೀಗಾಗಿ, ಕೆಲವುವಕಡೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮಜ್ಜಿಗೇರಿಯಲ್ಲಿ ಮನೆಗಳಿಗೆ ಹಾನಿ..!
ಇನ್ನು, ಭಾರೀ ಮಳೆ ಗಾಳಿಗೆ ಮಜ್ಜಿಗೇರಿಯಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ. ಮನೆಯ ಮೇಲ್ಚಾವಣಿಗಳು ಗಾಳಿಗೆ ಹಾರಿ ಬಿದ್ದಿರೋ ಮಾಹಿತಿ ಲಭ್ಯವಾಗಿದೆ.

ತೆಂಗಿನ ಮರಕ್ಕೆ ಸಿಡಿಲು..!
ಅದ್ರಂತೆ, ತಾಲೂಕಿನ ಹುನಗುಂದದಲ್ಲಿ ತೆಂಗಿನ ಮರಕ್ಕೆ ಸಿಡಿಲು ಹೊಡೆದು ಹೊತ್ತಿ ಉರಿದ ಘಟನೆಯೂ ನಡೆದಿದೆ. ಒಟ್ನಲ್ಲಿ, ತಾಲೂಕಿನಾಧ್ಯಂತ ಸುರಿದ ಭಾರೀ ಮಳೆಗಾಳಿಗೆ ಹಲವು ಅವಾಂತರಗಳು ಸಂಭವಿಸಿದ್ದು ಇನ್ನೂ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ‌.

error: Content is protected !!