ಮುಂಡಗೋಡ ತಾಲೂಕಿನಲ್ಲಿ ಲೋಕಸಭಾ ಚುನಾವಣೆಯ ಕಾವು ಏರತೊಡಗಿದೆ. ಅದ್ರಂತೆ ಮತದಾನಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನೂ ಅಧಿಕಾರಿಗಳು ಮಾಡಿಕೊಳ್ತಿದಾರೆ. ಚುನಾವಣಾಧಿಕಾರಿಗಳ ನಿರ್ದೇಶನದಂತೆ ಎಲ್ಲಾ ಕಾರ್ಯಗಳೂ ನಡಿತಿವೆ. ಅದರ ಭಾಗವಾಗಿ, ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ತಾಲೂಕಿನ ಎಲ್ಲಾ ಗಡಿಗಳಲ್ಲೂ ಚೆಕ್ ಪೊಸ್ಟ್ ಗಳನ್ನು ತೆರೆಯಲಾಗಿದೆ. ಆದ್ರೆ, ಹಾಗೆ ತೆರೆಯಲಾಗಿರೋ ಚೆಕ್ ಪೊಸ್ಟ್ ಗಳು ಬಹುತೇಕ ಹಿರಿಯ ಅಧಿಕಾರಿಗಳ ಬೇಜವಾಬ್ದಾರಿಯನ್ನು ಎತ್ತಿ ತೋರಿಸ್ತಿವೆ.
ರಣ ಬಿಸಿಲಲ್ಲೇ ಕರ್ತವ್ಯ..!
ಅಂದಹಾಗೆ, ತಾಲೂಕಿನ ಗಡಿಗಳಲ್ಲಿ ತೆರೆಯಲಾಗಿರೊ ಚೆಕ್ ಪೊಸ್ಟ್ ಗಳಲ್ಲಿ ಸಿಬ್ಬಂದಿಗಳು ಕೆಲಸ ನಿರ್ವಹಿಸೋದೇ ಕಷ್ಟಕರವಾಗಿದೆ. ಮೊದಲೆ ಬೇಸಿಗೆಯ ರಣ ಬಿಸಿಲಿದೆ. ಅದ್ರಲ್ಲೇ ಇಲ್ಲಿನ ಸಿಬ್ಬಂದಿಗಳು ಬಸವಳಿದು ಹೋಗ್ತಿದಾರೆ. ಆ್ಯಟಲಿಸ್ಟ್ ತಾತ್ಕಾಲಿಕ ಟೆಂಟ್ ನಿರ್ಮಿಸೋ ಕಾಮೆನ್ ಸೆನ್ಸ್ ಕೂಡ ಇಲ್ಲಿನ ಹಿರಿಯ ಅಧಿಕಾರಿಗಳಿಗೆ ಬಂದೇ ಇಲ್ಲ. ಹೀಗಾಗಿ, ಸಿಬ್ಬಂದಿಗಳು ಹಿಡಿಶಾಪ ಹಾಕುತ್ತಲೇ ಬಿಸಿಲಲ್ಲಿ ಒಣಗಿ ಹೋಗ್ತಿದಾರೆ.
ಎಸಿ ರೂಮಲ್ಲಿರೋರಿಗೆ ಅರ್ಥವಾಗಿಲ್ಲ..!
ಅಸಲು, ತಾಲೂಕಿನ ಚೆಕ್ ಪೊಸ್ಟ್ ಗಳಲ್ಲಿ ಕಾರ್ಯನಿರ್ವಹಿಸ್ತಿರೋ ಸಿಬ್ಬಂದಿಗಳು ಹೈರಾಣಾಗಿದ್ದಾರೆ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಛತ್ರಿಗಳನ್ನೇ ಬಳಸಿಕೊಳ್ತಿದಾರೆ. ನಿಜ ಅಂದ್ರೆ ಬಹುತೇಕ ಚೆಕ್ ಪೊಸ್ಟ್ ಗಳಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ. ಹೀಗಿದ್ದಾಗ ಎಸಿ ರೂಮಲ್ಲಿ ಕುಳಿತು ಆರ್ಡರ್ ಮಾಡೋ ಹಿರಿಯ ಅಧಿಕಾರಿಗಳಿಗೆ ಹೇಗೆ ತಾನೆ ಈ ಬಡ ಸಿಬ್ಬಂದಿಗಳ ಸಂಕಷ್ಟ ಅರ್ಥವಾದೀತು..?
ತಿಂಗಳುಗಟ್ಟಲೇ ಹೇಗೆ..?
ಹಾಗೆ ನೋಡಿದ್ರೆ, ಪಕ್ಕದ ಹಾವೇರಿ ಜಿಲ್ಲಾಡಳಿತ ತನ್ನ ಇಡೀ ವ್ಯಾಪ್ತಿಯ ಚೆಕ್ ಪೊಸ್ಟ್ ಗಳಲ್ಲಿ ತಾತ್ಕಾಲಿಕ ಟೆಂಟ್ ನಿರ್ಮಿಸಿದೆ. ಕುಡಿಯುವ ನೀರು ಸೇರಿದಂತೆ ಸಿಬ್ಬಂದಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿದೆ. ಆದ್ರೆ ನಮ್ಮ ಮುಂಡಗೋಡ ತಾಲೂಕಿನ ಅಧಿಕಾರಿಗಳಿಗೆ ಅದ್ಯಾವ ದಟ್ಟ ದರಿದ್ರ ವಕ್ಕರಿಸಿದೆಯೊ ಗೊತ್ತಿಲ್ಲ, ಜನರಿಗೆ ಹೋಗಲಿ ತಮ್ಮದೇ ಸಿಬ್ಬಂದಿಗಳ ಬಗ್ಗೆ ಕಾಳಜಿ ತೋರುತ್ತಿಲ್ಲ. ಬಹುಶಃ ಸಿಬ್ಬಂದಿಗಳು ಅಂದ್ರೆ ಇಲ್ಲಿನ ಅಧಿಕಾರಿಗಳ ದೃಷ್ಟಿಲಿ ಮನುಷ್ಯರೇ ಅಲ್ಲವೆನೋ..? ಧಿಕ್ಕಾರವಿರಲಿ ವ್ಯವಸ್ಥೆಗೆ..!
ಡಿಸೀ ಮೇಡಮ್ಮು ಸ್ವಲ್ಪ ಗಮನಿಸಿ..!