ಮುಂಡಗೋಡಿನಿಂದ ಮೆಕ್ಕಾ( ಹಜ್ ಯಾತ್ರೆಗೆ) ತೆರಳಿದ್ದ ಮೂವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಮುಂಡಗೋಡಿನ ರೋಣ್ಸ್ ಮೆಡಿಕಲ್ ಮಾಲೀಕ ಫಯಾಜ್ ಅಹ್ಮದ್ ರೋಣ್, ಅವ್ರ ಧರ್ಮಪತ್ನಿ ಆಫೀನಾ ಬಾನು ಹಾಗೂ ಅಣ್ಣನ ಮಗ ಆಯಾನ್ ರೋಣ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನುಳಿದ ಮೂವರಿಗೆ ಗಾಯವಾಗಿದೆ ಅನ್ನೊ ಮಾಹಿತಿ ಲಭ್ಯವಾಗಿದೆ.
ಮೆಕ್ಕಾದ ದರ್ಶನ ಮುಗಿಸಿಕೊಂಡು ಕಾರಿನಲ್ಲಿ ಮದಿನಾಕ್ಕೆ ಹೊರಟಿದ್ದ ವೇಳೆ, ಕಾರಿನ ಟೈಯರ್ ಸ್ಪೋಟಗೊಂಡ ಪರಿಣಾಮ ಕಾರ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಇನ್ನುಳಿದಂತೆ ಹೆಚ್ಚಿನ ಮಾಹಿತಿ ಬರಬೇಕಿದೆ.