ಮುಂಡಗೋಡ: ಪಟ್ಟಣದ ಬಿಜೆಪಿ ಮಂಡಳ ಕಾರ್ಯಾಲಯದಲ್ಲಿ ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ಶ್ರೀ ದೀನ್ ದಯಾಳ್ ಉಪಾಧ್ಯಾಯ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಂಭ್ರಮಿಸಲಾಯ್ತು.

ಇದ್ರ ಜೊತೆ ಲೋಕಸಭಾ ಚುನಾವಣೆ ಪೂರ್ವತಯಾರಿ ಕುರಿತು ಮಂಡಳದ ಕಾರ್ಯಕಾರಿಣಿ ಸಭೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಚಂದ್ರು ಎಸಳೆ, ಮಂಡಳ ಅಧ್ಯಕ್ಷ ಮಂಜುನಾಥ್ ಪಾಟೀಲ, ರಾಜ್ಯ ಎಸ್ ಟಿ ಮೋರ್ಚಾ ಕಾರ್ಯದರ್ಶಿ ಸಂತೋಷ ತಳವಾರ, ಜಿಲ್ಲಾ ವಿಶೇಷ ಅಹ್ವಾನಿತರಾದ ತುಕಾರಾಮ್ ಇಂಗಳೆ, ರೈತ ಮೋರ್ಚಾ ಅಧ್ಯಕ್ಷರಾದ ನಾಗರಾಜ್ ಬೆಣ್ಣಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ವೀಣಾ ಓಸಿಮಠ, ಮುಖಂಡರಾದ ಉಮೇಶ್ ಬಿಜಾಪುರ, ಶ್ರೀಕಾಂತ್ ಸಾನು, ಮಂಡಳ ಕಾರ್ಯದರ್ಶಿ ಭರತ್ ರಾಜ್ ಹದಳಗಿ, ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠ ಸದ್ಯಸ್ಯ ನಾಗನಗೌಡ ಪುರದನಗೌಡ್ರ, ಯುವಮೊರ್ಚಾ ಅಧ್ಯಕ್ಷ ಬಸುರಾಜ್ ಟನಕೇದಾರ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ರೇವಣಕರ, ಕೇದಾರಿ ಮುಗಳಿ, ಹಾಗೂ ಪಕ್ಷದ ಜಿಲ್ಲಾ ಮತ್ತು ಮಂಡಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!