ಮುಂಡಗೋಡ- ಕಲಘಟಗಿ ರಸ್ತೆಯಲ್ಲಿ ಮತ್ತೊಂದು ಭಯಾನಕ ಅಪಘಾತವಾಗಿದೆ. ಕಲಘಟಗಿ ತಾಲೂಕಿನ ಬೆಲವಂತರ ಬಳಿ ಬೈಕ್ ಹಾಗೂ ಸ್ಕೂಟಿ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದ ಯುವಕ ಮೃತಪಟ್ಟಿದ್ದಾನೆ. ಮತ್ತಿಬ್ಬರಿಗೆ ಗಾಯವಾಗಿದೆ.
ನಂದಿಕಟ್ಟಾ ಗ್ರಾಮದ ತುಕಾರಾಮ್ ಅರ್ಜುನ್ ಕಮ್ಮಾರ್ (26) ಬೈಕ್ ಅಪಘಾತದಲ್ಲಿ ಮೃತಪಟ್ಟ ಯುವಕನಾಗಿದ್ದಾನೆ. ಇನ್ನು ಮತ್ತೀರ್ವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ.
ಅಂದಹಾಗೆ, ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮಕ್ಕೆ ಬಹುಶಃ ಇವತ್ತು ಕರಾಳ ದಿನ. ಯಾಕಂದ್ರೆ ಒಂದೇ ದಿನ ಪ್ರತ್ಯೇಕ ಎರಡು ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಹುನಗುಂದ ಸಮೀಪ ಬೈಕ್ ಅಪಘಾತದಲ್ಲಿ ನಂದಿಕಟ್ಟಾ ಗ್ರಾಮ ಪಂಚಾಯತಿ ವಾಟರ್ ಮೆನ್ ಕೃಷ್ಣ ಕಟಾವಕರ್ ಮೃತಪಟ್ಟಿದ್ದರೆ, ಕಲಘಟಗಿ ಸಮೀಪದ ಬೆಲವಂತರ ಗ್ರಾಮದ ಬಳಿ ಯುವಕ ತುಕಾರಾಂ ಅರ್ಜುನ ಕಮ್ಮಾರ್ ಮೃತಪಟ್ಟಿದ್ದು ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.