ಇದು ನಿಜಕ್ಕೂ ಮುಂಡಗೋಡಿಗರನ್ನು ನಿಬ್ಬೆರಗಾಗಿಸೋ ಸುದ್ದಿ. ಗಂಡನನ್ನೇ ಕೊಲೆ ಮಾಡಿ, ವಿಪರೀತ ಎಣ್ಣೆ ಹೊಡೆದು ಸತ್ತು ಹೋಗಿದ್ದಾನೆ ಅಂತಾ ಬಿಂಬಿಸಿರೋ ಖತರ್ನಾಕ ಪತ್ನಿಯೊಬ್ಬಳ ಗುಸು ಗುಸು, ಪಿಸು ಪಿಸು..!
15 ದಿನಗಳ ಹಿಂದೆ..!
ಅಸಲು ಕಳೆದ 15 ದಿನಗಳ ಹಿಂದೆ ನಡೆದು ಹೋದ ಈ ಆಟದಲ್ಲಿ ಉಸಿರು ಚೆಲ್ಲಿದವನ ಆತ್ಮ ಇನ್ನೂ ಅದೇ ಜಾಗದಲ್ಲಿ ಗಿರಕಿ ಹೊಡೆಯುತ್ತಿದೆಯೋ ಏನೋ..? ತಾನೇ ತಾಳಿ ಕಟ್ಟಿದ್ದ ಮಾಯಾಂಗನೆಯೇ ತನ್ನನ್ನ ಕೊಂದು ಹಾಕಿದ್ದಾಳೆ, ನಾನು ಕುಡಿದು ಸತ್ತಿಲ್ಲ ಅಂತಾ ಅದೇಷ್ಟೇ ಬಾಯಿ ಬಡಕೊಂಡ್ರೂ ಪಾಪ ಆ ಪತಿಯ ಆತ್ಮದ ಮೂಕ ರೋಧನ ಯಾರಂದ್ರೆ ಯಾರಿಗೂ ಕೇಳಿಸಿರಲೇ ಇಲ್ಲವಂತೆ, ಆದ್ರೆ, ಸದ್ಯ ಅದೊಂದು ಸಮಾಜದ ಮುಖಂಡರೇ ನಿಂತು ಭಯಾನಕ ಕೇಸನ್ನು ಬಟಾಬಯಲು ಮಾಡಿದ್ದಾರೆ ಅಂತಾ ಜನ ಮಾತಾಡಿಕೊಳ್ತಿದಾರೆ. ಈ ಮೂಲಕ ನಮ್ಮ ಮುಂಡಗೋಡ ಪೊಲೀಸರೂ ಕೂಡ ತಲೆ ಕೆಡಿಸಿಕೊಳ್ಳದೇ ಸಹಜ ಸಾವು ಅಂತ ಕೈ ತೊಳೆದುಕೊಂಡಿದ್ದ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಕೊಟ್ಟಿದ್ದಾರಂತೆ.
ಅಷ್ಟಕ್ಕೂ ಏನಾಯ್ತು..?
ಈಗ್ಗೆ ಸುಮಾರು 15 ದಿನಗಳ ಹಿಂದಿನ ಮಾತಿದು. ಮುಂಡಗೋಡಿನ ಅದೊಂದು ಏರಿಯಾದಲ್ಲಿ, ಅವನೊಬ್ಬ ತನ್ನ ಮನೆಯಲ್ಲೇ ವಿಪರೀತ ಕುಡಿದು ಸತ್ತು ಹೋಗಿದ್ದಾನೆ ಅಂತಾ ಪುಕಾರು ಎಬ್ಬಿಸಲಾಗಿತ್ತು. ಖುದ್ದು ಹೆಂಡತಿಯೇ ತನ್ನ ಗಂಡ ಎಣ್ಣೆ ಹೊಡೆದು ಮಲಗಿದ್ದಲ್ಲೇ ಹೆಣವಾಗಿದ್ದಾನೆ ಅಂತಾ ಕೇಸು ಕ್ಲೋಸು ಮಾಡಿಸಿದ್ದಳು. ಆದ್ರೆ, ಗಂಡ ಸತ್ತ ನಂತರ ಹೆಂಡತಿಯ ಕಾರುಬಾರು, ಜೀವನ ಶೈಲಿ ನೋಡಿ ಜನ್ರಿಗೆ ಸಣ್ಣದೊಂದು ಅನುಮಾನ ಶುರುವಾಗಿತ್ತು. ಹೀಗಾಗಿ, ಮೃತನ ತಾಯಿ, ತನ್ನ ಸೊಸೆಯ ನಡವಳಿಕೆಗಳ ಬಗ್ಗೆ ಅನುಮಾನಗೊಂಡು ತನ್ನೂರಿನ ತನ್ನ ಸಮಾಜದ ಮುಖಂಡರಲ್ಲಿ ಒಂದಿಷ್ಟು ನೋವು ತೋಡಿಕೊಂಡಿದ್ದಳಂತೆ. ಹೀಗಾಗಿ, ಸಮಾಜದ ಮುಖಂಡರ ಎದುರುಗಡೆ ಆಕೆಯನ್ನು ನಿಲ್ಲಿಸಿ ಪ್ರಶ್ನಿಸಿದಾಗ ನಡೆದ ಅಸಲೀ ಘಟನೆಯನ್ನು ಬಾಯಿಬಿಟ್ಟಿದ್ದಾಳೆ ಅಂತಾ ಹೇಳಲಾಗ್ತಿದೆ.
ಮರ್ಮಾಂಗ ಹಿಚುಕಿ ಕೊಂದಳಾ ಪಾಪಿ..?
ಅಸಲು, ಈ ಘಟನೆಯ ಬಗ್ಗೆ ಕೂಲಂಕುಶವಾಗಿ ತನಿಖೆಗಿಳಿದ ಸಮಾಜದ ಪಂಚರು, ಆಕೆಯನ್ನು ಖಡಕ್ಕಾಗಿ ಪ್ರಶ್ನಿಸಿದ್ದಾರೆ. ಗಂಡ ಹೇಗೆ ಸತ್ತ..? ಆತನ ಸಾವಿಗೆ ಕಾರಣ ಏನಾಗಿತ್ತು..? ವಯಸ್ಸಲ್ಲದ ವಯಸಲ್ಲಿ ಆತನಿಗೆ ಸಾಯುವಂತಹ ಸಮಸ್ಯೆ ಆದ್ರೂ ಏನಿತ್ತು..? ಇಂತೇಲ್ಲ ಪ್ರಶ್ನೆಗಳ ಸುರಿಮಳೆಗೈದ ಪಂಚರ ಎದುರು, ಇನ್ನು ನನ್ನ ಆಟ ನಡಿಯಲ್ಲ ಅಂತಾ ಇರೋ ಬರೋ ಸತ್ಯವನ್ನೇಲ್ಲ ಕಕ್ಕಿದ್ದಾಳಂತೆ ಆ ಐನಾತಿ..! ಹೀಗಾಗಿ, ಆ ಪ್ರಕರಣವೀಗ ಮುಂಡಗೋಡ ಪೊಲೀಸ್ ಠಾಣೆಯ ಮೆಟ್ಟಿಲೇರಲಿದೆ ಅನ್ನೋ ಮಾತು ಕೇಳಿ ಬಂದಿದೆ.
ದಾಖಲಾಗತ್ತಾ ಕೇಸ್..?
ಬಹುಶಃ, ಮಗನ ಕಳೆದುಕೊಂಡಿರೋ ಆ ತಾಯಿ ಇವತ್ತೇ ಪೊಲೀಸರಿಗೆ ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ, ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಬಯಲು ಮಾಡಬೇಕಿರೋ ಜವಾಬ್ದಾರಿ ಪೊಲೀಸರ ಮೇಲಿದೆ. ಅದೇನೇ ಆಗಲಿ, ಕ್ರೈಮು ಅನ್ನೋದನ್ನ, ಅದೆಷ್ಟೇ ತಿಪ್ಪರಲಾಗ ಹಾಕಿದ್ರೂ ಹೆಚ್ಚು ದಿನ ಮುಚ್ಚಿಡೋಕಾಗಲ್ಲ ಅನ್ನೋದು ಈ ಪ್ರಕರಣದಿಂದ ಮತ್ತೊಮ್ಮೆ ಸಾಬೀತಾಗುವ ಎಲ್ಲಾ ಲಕ್ಷಣಗಳಿವೆ.