ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ಹೃದಯಾಘಾತದಿಂಧ ಅಕಾಲಿಕ ಸಾವು ಕಂಡಿದ್ದಾರೆ. ಪತಿ ವಿಜಯ್ ರಾಘವೇಂದ್ರ ಜೊತೆಗೆ ಬ್ಯಾಂಕಾಕ್‍ಗೆ ಪ್ರವಾಸಕ್ಕೆಂದು ತೆರಳಿದ್ದ ವೇಳೆ ಹೃದಯಾಘಾತ ಆಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೆ ಜತೆಗೆ ಲೋ ಬಿಪಿ ಕೂಡ ಇದ್ದು ಅದೂ ಕಾರಣ ಎನ್ನಲಾಗಿದೆ.

ದಿಗ್ಭ್ರಮೆ..!
ಇನ್ನು, ಈ ಸುದ್ದಿ ಕನ್ನಡ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿಯಾಗಿದೆ. ವಿಜಯರಾಘವೇಂದ್ರ ದಂಪತಿಗೆ ಶೌರ್ಯ ಎಂಬ ಓರ್ವ ಪುತ್ರನಿದ್ದಾನೆ. 2016ರಲ್ಲಿ ಬಿಡುಗಡೆಯಾದ ಅಪೂರ್ವ ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿ ಸ್ಪಂದನಾ ನಟಿಸಿದ್ದರು. ಅವರು ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಂ ಅವರ ಪುತ್ರಿಯಾಗಿದ್ದು ವಿಜಯ ರಾಘವೇಂದ್ರ ಅವರನ್ನು 2007, ಆಗಸ್ಟ್ 26 ರಂದು ಪ್ರೀತಿಸಿ ಮದುವೆಯಾಗಿದ್ದರು. ಇವರು 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಕೇವಲ 19 ದಿನಗಳು ಬಾಕಿ ಇರುವಾಗ ಈ ದುರಂತ ನಡೆದಿದ್ದು ವಿಧಯಾಟ ಇವರ ಬಾಳಲ್ಲಿ ಭಾರೀ ಆಘಾತ ನೀಡಿದೆ.

error: Content is protected !!