ಬಂಕಾಪುರ ಬಳಿ ಲಾರಿ, ಕಾರು ಮುಖಾಮುಕಿ ಡಿಕ್ಕಿ, ಮೆಡಿಕಲ್ ವಿದ್ಯಾರ್ಥಿ ಸ್ಥಳದಲ್ಲೇ ಸಾವು..!

ಶಿಗ್ಗಾವಿ: ಲಾರಿ ಹಾಗೂ ಕಾರು ಮಧ್ಯೆ ಡಿಕ್ಕಿಯಾದ ಪರಿಣಾಮ ಮೆಡಿಕಲ್ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಶಿಗ್ಗಾವಿ ತಾಲೂಕಿ‌ನ ಬಂಕಾಪುರ ಬಳಿಯ ತಂಬಾಕದ ಮನೆಯ ಹತ್ತಿರ ರಾ.ಹೆದ್ದಾರಿಯಲ್ಲಿ ಘಟನೆ ನಡೆದಿದೆ.

ಅಖಿಲ ಕುಂಬಾರ (27), ಎಂಬುವ ವಿದ್ಯಾರ್ಥಿ ಸಾವು ಕಂಡಿದ್ದು, ಬೆಳಗಾವಿಯಲ್ಲಿ ಎಂಡಿ ವಿದ್ಯಾಭ್ಯಾಸ ಮಾಡ್ತಾ ಇದ್ದ, ಬೆಂಗಳೂರಿನ ನಿವಾಸಿ ಎನ್ನಲಾಗಿದೆ. ಇಂದು ಬೆಳಗಾವಿ ಇಂದ ದಾವಣಗೆರೆ ಗೆ ಹೊರಟಿದ್ದ ವೇಳೆ, ಹೆದ್ದಾರಿಯ ಮೇಲೆ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕಾರು ನುಜ್ಜು ನಜ್ಜುಗುಜ್ಜಾಗಿದೆ. ಹೀಗಾಗಿ, ವಿದ್ಯಾರ್ಥಿ ಅಖಿಲ್ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ಬಂಕಾಪುರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌. ಬಂಕಾಪುರ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ‌.

error: Content is protected !!