ಕೋಣನಕೇರಿ ಸಮೀಪದ ಬಸವನಕಟ್ಟಿ ಗ್ರಾಮದಲ್ಲಿ ಮೂವರ ಮೇಲೆ ಕರಡಿ ದಾಳಿ, ಇಬ್ಬರಿಗೆ ಗಂಭೀರ ಗಾಯ..!

ಶಿಗ್ಗಾವಿ: ತಾಲೂಕಿನ ಬಸವನಕಟ್ಟಿ ಗ್ರಾಮದಲ್ಲಿ ಓರ್ವ ಮಹಿಳೆ ಸೇರಿದಂತೆ ಮೂವರ ಮೇಲೆ ಭೀಕರವಾಗಿ ಕರಡಿ ದಾಳಿ ಮಾಡಿದೆ. ಪರಿಣಾಮ ಇಬ್ಬರಿಗೆ ಗಂಭೀರ ಗಾಯಗೊಂಡಿದ್ದಾರೆ.

ಮುಂಡಗೋಡ ಸಮೀಪದ ಕೋಣನಕೇರಿ ರಸ್ತೆಯಲ್ಲಿರೋ ಬಸವನಕಟ್ಟಿ ಗ್ರಾಮದ ಬಸಿರಸಾಬ್ ಸವದತ್ತಿ ಹಾಗೂ ಶಬಿನಾಬಾನು ಸವದತ್ತಿ, ರಜಾಕ್ ನಾಲವತ್ತಿ ಎಂಬುವ ಮೂವರ ಮೇಲ ಕರಡಿ ದಾಳಿ ಮಾಡಿದೆ.

ಶನಿವಾರ ಮದ್ಯಾಹ್ನ ಜಮೀನಿಗೆ ಕೆಲಸಕ್ಕೆ ಎಂದು ಹೋದ ವೇಳೆ ಕರಡಿ ದಾಳಿ ಮಾಡಿದ್ದು, ಗಾಯಗೊಂಡಿರೋ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ.

error: Content is protected !!