ಮುಂಡಗೋಡ: ತಾಲೂಕಿನ ಇಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರದ ಕೊಪ್ಪ ಗ್ರಾಮದಲ್ಲಿ ಹಲವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್ ಪಕ್ಷದ ಶಾಲು ಹೊದಿಸಿ ಕಾರ್ಯಕರ್ತರನ್ನು ಬರಮಾಡಿಕೊಂಡಿದ್ದಾರೆ.

ಇಂದೂರಿನ ಬಿಜೆಪಿ ಮುಖಂಡ ಬಿ.ಕೆ.ಪಾಟೀಲ್, ಕೊಪ್ಪ ಗ್ರಾಮದ ಚನ್ನಬಸಪ್ಪ ಮುಂಗೈ ಸೇರಿದಂತೆ ಹಲವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ್ರು.

ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಹಿರಿಯ ದುರೀಣ ಎಚ್.ಎಂ.ನಾಯ್ಕ್, ಮಹ್ಮದ್ ರಫೀಕ್ ದೇಸಳ್ಳಿ, ಪಿ.ಜಿ.ತಂಗಚ್ಚನ್, ರಾಜಶೇಖರ್ ಪಾಟೀಲ್, ಯುವ ಕಾಂಗ್ರೆಸ್ ಮುಖಂಡರಾದ ಬಸನೂ ನಡುವಿನಮನಿ, ಬಸು ಹರಿಜನ, ಧರ್ಮರಾಜ್ ನಡಗೇರಿ, ಬಿಷ್ಟನಗೌಡ ಪಾಟೀಲ್, ಮಲ್ಲಿಕಾರ್ಜುನ ಸುಣಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: Content is protected !!