ಬಾಗಲಕೋಟೆ: ಸಿಡಿಲಿನ ಹೊಡೆತಕ್ಕೆ ಮನೆಯ ಮಣ್ಣಿನ ಮೇಲ್ಛಾವಣಿ ಕುಸಿದು ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವು ಕಂಡ ದಾರುಣ ಘಟನೆ ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ನಡೆದಿದೆ.
ನೆನ್ನೆ ರಾತ್ರಿ 11.30 ಸುಮಾರಿಗೆ ನಡೆದ ಘಟನೆ ಇದಾಗಿದ್ದು, ಯಂಕುಬಾಯಿ ಕುಲಕರ್ಣಿ (79), ಶಾರದಾ ಪತ್ತಾರ (61) ಮೃತ ದುರ್ದೈವಿಗಳು. ಅಂದಹಾಗೆ, ದಿನಂಪ್ರತಿ ಯಂಕುಬಾಯಿ ಕುಲಕರ್ಣಿ ಅವ್ರ ಮನೆಯಲ್ಲೇ ಶಾರದಾ ಪತ್ತಾರ ಮಲಗುತ್ತಿದ್ರು.
ನಿನ್ನೆ ಸುರಿದ ಭಾರೀ ಮಳೆ ಹಾಗೂ ಸಿಡಿಲಿನ ರಭಸಕ್ಕೆ ಮನೆಗೆ ಹಾನಿಯಾಗಿದ್ದು, ಮಣ್ಣಿನ ಮೇಲ್ಛಾವಣಿ ಕುಸಿದಿದೆ. ಹೀಗಾಗಿ, ಮನೆಯಲ್ಲಿ ಮಲಗಿದ್ದ ಯಂಕುಬಾಯಿ, ಶಾರದಾ ಅವ್ರ ಮೇಲೆ ಗೋಡೆ ಬಿದ್ದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾನಪ್ಪಿದ್ದಾರೆ.
ಇನ್ನು, ಅಗ್ನಿಶಾಮಕ ದಳ ಸಿಬ್ಬಂದಿಗಳ ಸಾಹಾಯದಿಂದ ಶವಗಳನ್ನ ಹೊರತಗೆಯಲಾಗಿದ್ದು, ಬಾದಾಮಿ ತಾಲೂಕು ಆಸ್ಪತ್ರೆಯಲ್ಲಿ ಮೃತ ಮಹಿಳೆಯರ ಶವ ಪರೀಕ್ಷೆ ನಡೆದಿದೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.