ಶಿಗ್ಗಾವಿಯ ಕುಸ್ತಿ ಹಬ್ಬದಲ್ಲಿ ಜಗಜಟ್ಟಿಗಳ ರೋಮಾಂಚಕ ಕುಸ್ತಿ, ಪಂದ್ಯಾವಳಿಗೆ ಇಂದು ಚಾಲನೆ..!

ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಇಂದು ಎಲ್ಲಿ ನೋಡಿದರು ಪೈಲ್ವಾನ್ ರುಗಳ ಜಬರ್ಧಸ್ತ್ ಸಂಚಾರ. ಕಣದಲ್ಲಿ ಧೂಳೆಬ್ಬಿಸಿ ತೊಡೆತಟ್ಟಿ ನಿಂತ ಕುಸ್ತಿ ಕಲಿಗಳ ರೋಮಾಂಚಕ ಪಟ್ಟು. ಜಿಲ್ಲೆವಹೊರ ಜಿಲ್ಲೆಯಿಂದ ಹಾಗೂ ಹೊರ ರಾಜ್ಯದಿಂದ ಬಂದಿದ್ದ ನೂರಾರು ಜಗಜಟ್ಟಿಗಳ ಕಾದಾಟ.. ಅಭಿಮಾನಿಗಳ ಕೇಕೆ ಶಿಳ್ಳೆಗಳ ಝೇಂಕಾರ..!

ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ಐದು ದಿನಗಳ ಕಾಲ‌ ನಡೆಯುವ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯವನ್ನ ಇದೆ ಮೊದಲ ಬಾರಿಗೆ ಆಯೋಜನೆ ಮಾಡಲಾಗಿತ್ತು. ಇಂದು ಈ ಕುಸ್ತಿ ಪಂದ್ಯಕ್ಕೆ ಸಾಂಕೇತಿಕವಾಗಿ ಸ್ಥಳೀಯ ಜನಪ್ರತಿನಿಧಿಗಳು ಚಾಲನೆ ನೀಡಿದರು. ಅಖಾಡಕ್ಕೆ ಹರಿಯಾಣ, ಮಧ್ಯಪ್ರದೇಶ, ತೆಲಂಗಾಣ ಹಾಗೂ ರಾಜ್ಯದ ಬೇರೆ ಬೇರೆ ಜಿಲ್ಲೆಯಿಂದ ಪೈಲ್ವಾನರು ಆಗಮಿಸಿದ್ದರು.1 ಕೋಟಿ 38 ಲಕ್ಷ ಮೊತ್ತದ ಬಹುಮಾನ ಗೆಲ್ಲುವುದಕ್ಕಾಗಿ ಜಗಜಟ್ಟಿಗಳು ಮೈಗೊಡವಿ ಹೊರಾಡಿದ ಪರಿ ಕಂಡು ಅಭಿಮಾನಿಗಳು ಸಂಭ್ರಮಿಸಿದರು.

ಇಂದು 80 ಕೆಜಿ,60 ಕೆಜಿ,30-40 ಕೆಜಿ ತೂಕದ ಪೈಲ್ವಾನರ ಅಖಾಡಕ್ಕೆ ದುಮುಕಿದರು. ಪಿಟ್ ಎಂಡ್ ಪೈನ್ ಆಗಿದ್ದ ಕಟ್ಟುಮಸ್ತಾದ ಪಟುಗಳ ಇದಕ್ಕಾಗಿ ತಿಂಗಳುಗಳ ಕಾಲ ದೇಹ ದಂಡಿಸಿದ್ದಾರೆ. ಯುವಕರು ಹಾಗೂ ಯುವತಿಯರು ಸೇರಿದಂತೆ ಸುಮಾರು 800 ಕ್ಕೂ ಅಧಿಕ ಪೈಲ್ವಾನರು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ.17 ವರ್ಷದಿಂದ 40 ವರ್ಷದ ವಯೋಮಾನದವರು ಮಣ್ಣಿನಲ್ಲಿ ಮೈಗೊಡವಿ ಎದುರಾಳಿಗಳನ್ನು ಮಣಿಸಿದರು. ಯುವಜನ ಹಾಗೂ ಕ್ರೀಡಾ ಇಲಾಖೆ ಹಾವೇರಿ ಇವರಿಂದ ಆಯೋಜನೆ ಮಾಡಲಾಗಿತ್ತು. ಡಿಸಿ,ಸಿಇಓ,ಅಧಿಕಾರಿಗಳು ಹಾಗೂ ಹಿರಿಯ ಪೈಲ್ವಾನರು ಕುಸ್ತಿ ಕಲಿಗಳಿಗೆ ಶುಭ ಹಾರೈಸಿದರು..ಇದು ಗ್ರಾಮೀಣ ಕ್ರೀಡೆ ನಾವೇಲ್ಲರೂ ಸೇರಿ ಕಾಪಾಡಿ,ಉಳಿಸಿ ಬೆಳಸೋಣ ಎಂದರು.

ದೈಹಿಕ ಕಸರತ್ತು ತಾಕತ್ತು ತೋರಿಸುವ ರೈತರ ಹಾಗೂ ಯುವಕರ ಕ್ರೀಡೆಗಳಲ್ಲೊಂದಾದ ಕುಸ್ತಿ ಗರಡಿಮನಿಗಳು ಅಳವಿಂಚಿನಲ್ಲಿ ಇವೆ. ಗ್ರಾಮೀಣ ಭಾಗದಲ್ಲಿ ಇಂತಹ ಪಂದ್ಯಾಟಗಳನ್ನು ಮಾಡುವ ಮೂಲಕ ಯುವ ಸಮುದಾಯ ಕುಸ್ತಿ ಆಟವನ್ನು ಜೀವಂತವಾಗಿಸಿದ್ದಾರೆ.

error: Content is protected !!