ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳು ಪ್ರತಿಷ್ಟಿತ ಸೈನಿಕ ಶಾಲೆಗೆ ಆಯ್ಕೆಯಾಗಿದ್ದಾರೆ. ಭಟ್ಕಳ ತಾಲೂಕಿನ ಶಿರಾಲಿಯ ಪ್ರತಿಭಾವಂತ ವಿದ್ಯಾರ್ಥಿ ಕುಶಾಲ್ ನಿತ್ಯಾನಂದ್ ನಾಯ್ಕ್ ಹಾಗೂ ಮುಂಡಗೋಡ ತಾಲೂಕಿನ ಕಳಕಿಕಾರೆಯ ಭೂಷಣ್ ಪಾಟೀಲ್ ಸೈನಿಕ ಶಾಲೆಗೆ ಆಯ್ಕೆಯಾಗಿ ಕೀರ್ತಿ ತಂದಿದ್ದಾರೆ..
ಶಿರಾಲಿಯ ಕುಶಾಲ್ ನಾಯ್ಕ್ ಸಾಧನೆ..!
ಅಂದಹಾಗೆ, ಭಟ್ಕಳ ತಾಲೂಕಿನ ಶಿರಾಲಿಯ ನಿತ್ಯಾನಂದ್, ಪ್ರೇಮಾ ದಂಪತಿಯ ಸುಪುತ್ರ ಕು. ಕುಶಾಲ್ ನಿತ್ಯಾನಂದ್ ನಾಯ್ಕ್ ವಿಜಯಪುರದ Oxford English medium school ನಲ್ಲಿ ಐದನೇ ತರಗತಿ ಓದುತ್ತಿದ್ದು, ಸದ್ಯ ಆಲ್ ಇಂಡಿಯಾ ಸೈನಿಕ ಶಾಲೆಯಲ್ಲಿ ಪ್ರವೇಶಾತಿಗಾಗಿ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ. ಈತನ ತಂದೆ ಬಿಎಸ್ ಎಫ್ ಯೋಧರಾಗಿದ್ದು, ಸದ್ಯ ಪಶ್ಚಿಮ ಬಂಗಾಲದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರನ ಸಾಧನೆಗಾಗಿ ತಂದೆ ನಿತ್ಯಾನಂದ, ತಾಯಿ ಪ್ರೇಮಾ ಸೇರಿದಂತೆ ಕುಟುಂಬಸ್ಥರು, ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹರ್ಷ ವ್ಯಕ್ತ ಪಡಿಸಿದ್ದಾರೆ.
ಕಳಕಿಕಾರೆಯ ವಿದ್ಯಾರ್ಥಿ ಸಾಧನೆ..!
ಅದ್ರಂತೆ, ಮುಂಡಗೋಡ ತಾಲೂಕಿನ ಕಳಕಿಕಾರೆ ಶಾಲೆಯ ಭೂಷಣ ಪಾಟೀಲ್ ಸೈನಿಕ ಶಾಲೆಗೆ ಆಯ್ಕೆ ಆಗಿದ್ದಾನೆ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸುಬೇದಾರ್ ಧಾಕ್ಲು ಜಾನು ಪಾಟೀಲ್ ಇವರ ಸುಪುತ್ರನಾಗಿರೋ ಭೂಷಣ್ ಪಾಟೀಲ್ ಸ.ಹಿ.ಪ್ರಾ. ಶಾಲೆ ಕಳಕಿಕಾರೆಯಲ್ಲಿ 5ನೇ ತರಗತಿ ಓದುತ್ತಿದ್ದು “ಆಲ್ ಇಂಡಿಯಾ ಸೈನಿಕ ಶಾಲೆಗಾಗಿ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು, 6ನೇ ತರಗತಿಗೆ (6th Std) ಬಿಜಾಪುರ ಸೈನಿಕ ಶಾಲೆಗೆ ಪ್ರವೇಶಾತಿ ಪಡೆದಿರುತ್ತಾನೆ. ಹೀಗಾಗಿ, ದನಗರಗೌಳಿ ಸಮಾಜದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಸೈನಿಕ ಶಾಲೆಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ಒಟ್ನಲ್ಲಿ, ಕಠಿಣ ಪರಿಶ್ರಮದ ಫಲವಾಗಿ ಸೈನಿಕ ಶಾಲೆಗೆ ಆಯ್ಕೆಗೊಂಡಿರೋ ಉತ್ತರ ಕನ್ನಡದ ಕುಶಾಲ್ ನಿತ್ಯಾನಂದ್ ನಾಯ್ಕ್ ಹಾಗೂ ಭೂಷಣ ಪಾಟೀಲ್ ಅವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸೋಣ.