ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ರಾಮಲಿಂಗೇಶ್ವರ ಸ್ವಾಮಿಯ ಪುರಾತನ ಐತಿಹಾಸಿಕ ರಥೋತ್ಸವ ಅದ್ದೂರಿಯಾಗಿ ಜರುಗಿತು.

ನೂರಾರು ವರ್ಷಗಳ ಇತಿಹಾಸ ಹೊಂದಿರೋ ಶ್ರೀ ರಾಮಲಿಂಗೇಶ್ವರ ದೇವರ, ಪುರಾತನ ರಥದಲ್ಲಿ ರಾಮಲಿಂಗೇಶ್ವರ ಸ್ವಾಮಿಯನ್ನು ಪ್ರತಿಷ್ಟಾಪಿಸಿ ರಥೋತ್ಸವ ಮಾಡಲಾಯಿತು. ಅಂದಹಾಗೆ, ಹುನಗುಂದ ಗ್ರಾಮದಲ್ಲಿ ಪುರಾತನವಾದ ಬೃಹತ್ ರಥ ಆಕರ್ಷಣೀಯವಾಗಿದ್ದು, ವಿಶಿಷ್ಟ ಕುಸೂರಿ ಕಲೆಗಳನ್ನು ಹೊಂದಿದೆ. ರಥದಲ್ಲಿ ವಿವಿಧ ಪ್ರಕಾರದ ದಾರ್ಮಿಕ ಕಥೆಗಳನ್ನು, ಐತಿಹ್ಯಗಳನ್ನು ಸಾರುವ ಉಬ್ಬು ಶಿಲ್ಪಗಳನ್ನು ಕೆತ್ತಲಾಗಿದ್ದು ವಿಶೇಷವಾಗಿದೆ.

ನಾಳೆಯೂ ವೀರಭದ್ರ ರಥೋತ್ಸವ..!
ಅಂದಹಾಗೆ, ನಾಳೆ ಮಂಗಳವಾರವೂ ಶ್ರೀ ವೀರಭದ್ರ ಸ್ವಾಮಿಯ ರಥೋತ್ಸವ ನಡೆಯಲಿದೆ. ನಾಳೆ ಬೆಳಿಗ್ಗೆಯಿಂದಲೇ ವೀರಭದ್ರ ಸ್ವಾಮಿಗೆ ಗುಗ್ಗಳೋತ್ಸವ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳೂ ನಡೆಯಲಿವೆ.

ಆಕರ್ಷಕ ಕೋಲಾಟ..!
ಇನ್ನು, ರಥೋತ್ಸವದ ಮೆರವಣಿಗೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳಿಂದ ವಿಶಿಷ್ಟ ಕೋಲಾಟದ ನೃತ್ಯಗಳು ದಾರಿಯುದ್ದಕ್ಕೂ ಆಕರ್ಷಕವಾಗಿದ್ದವು. ವಿಶೇಷ ಅಲಂಕಾರದೊಂದಿಗೆ ವಿವಿಧ ಜಾನಪದ ಹಾಗೂ ಸಿನಿಮಾ ಹಾಡುಗಳಿಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿದ್ರು. ಕೋಲಾಟದ ಮೆರಗು ಹೆಚ್ಚಿಸಿದ್ರು. ಹಾಗೆಯೇ ಸಾವಿರಾರು, ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ರಥಕ್ಕೆ ಉತ್ತತ್ತಿ, ಹಣ್ಣು ತೂರಿ ಸಂಭ್ರಮಿಸಿದ್ರು‌.

error: Content is protected !!