ಬಸವೇಶ್ವರಿ ಮಾತೆಯವರಿಗೆ, ಸಚಿವ ಶಿವರಾಮ್ ಹೆಬ್ಬಾರ್ ನಿಂದನೆ ಮಾಡಿದ್ದಾರೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ, ಇವತ್ತು ಮುಂಡಗೋಡಿನಲ್ಲಿ ಮತ್ತೊಂದು ಪತ್ರಿಕಾಗೋಷ್ಟಿ ನಡೆದಿದೆ. ಬಿಜೆಪಿ ಮುಖಂಡರು ಹಾಗೂ ಉಗ್ನಿಕೇರಿ ಗ್ರಾಮದ ಹಲವರು ಪತ್ರಿಕಾಗೋಷ್ಟಿ ನಡೆಸಿದ್ದಾರೆ. ಮಾತೆ ಬಸವೇಶ್ವರಿಯವರಿಗೆ ಸಚಿವ್ರು ಏನಂದ್ರೆ ಏನೂ ಅಂದಿಲ್ಲ, ಯಾವುದೇ ರೀತಿ ಹಗುರವಾಗಿ ಮಾತನಾಡಿಲ್ಲ ಅಂತಾ ಈ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಇನ್ನು, ಪತ್ರಿಕಾಗೋಷ್ಟಿಯಲ್ಲಿ ಭಾಗವಸಿದ್ದ ಬಿಜೆಪಿ ಮಂಡಲಾಧ್ಯಕ್ಷ ನಾಗಭೂಷಣ ಹಾವಣಗಿ, ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್, ಗುಡ್ಡಪ್ಪ ಕಾತೂರ್, ಉಮೇಶ್ ಬಿಜಾಪುರ, ಮಹೇಶ ಹೊಸಕೊಪ್ಪ ಸೇರಿದಂತೆ ಹಲವ್ರು ಸ್ಪಷ್ಟನೆ ನೀಡಿದ್ದಾರೆ.
ಖಡಕ್ ವಾರ್ನಿಂಗ್ ಕೊಟ್ಟ ನಾಗಭೂಷಣ ಹಾವಣಗಿ ..!
ಇನ್ನು, ಪತ್ರಿಕಾಗೋಷ್ಟಿಯಲ್ಲಿ ಮಂಡಲಾಧ್ಯಕ್ಷ ನಾಗಭೂಷಣ ಹಾವಣಗಿ ಮಾತನಾಡಿ, ಕೆಲ ದುಷ್ಟ ಹಿತಾಸಕ್ತಿಗಳು ನಮ್ಮ ನಾಯಕರ ಬಗ್ಗೆ ತಪ್ಪು ಮಾಹಿತಿ ಬಿಂಬಿಸಲು ಹೊರಟಿದ್ದಾರೆ. ರಾಜಕೀಯ ದುರುದ್ದೇಶಕ್ಕಾಗಿ ತಿರುಚಲು ಹೊತಟಿದ್ದಾರೆ. ನಾವೇಲ್ಲ ಮಾತಾಜಿಯವರ ಭಕ್ತರೇ ಆಗಿದ್ದಿವಿ. ಅಲ್ದೇ, ನಮ್ಮ ನಾಯಕ ಶಿವರಾಮ್ ಹೆಬ್ಬಾರ್ ಸಾಹೇಬ್ರೂ ಕೂಡ ಮಾತಾಜಿಯವರ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಅದೇನೇ ಎಚ್ಚರಿಕೆ ಕರೆ ಘಂಟೆ ಕೊಡೋದಾಗಲಿ, ಅದೇನೇ ರಾಜಕೀಯ ಮಾಡೋದಿದ್ರೂ ನೈತಿಕವಾಗಿ ಬರಲಿ, ಹೀಗೇಲ್ಲ ಸುಳ್ಳು ಸುಳ್ಳು ಆರೋಪದೊಂದಿಗೆ ಗಂಟೆ ಬಾರಿಸೋದು ಬೇಡ ಅಂತಾ “ನಾಗ”ಭೂಷಣ ಹಾವಣಗಿ ಭುಸುಗುಟ್ಟಿದ್ರು.
ರವಿಗೌಡ ಪಾಟೀಲ್ ಹೇಳಿದ್ದಿಷ್ಟು..!
ಇನ್ನು, ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರವಿಗೌಡ ಪಾಟೀಲ್, ನಮ್ಮ ಹೆಬ್ಬಾರ್ ಸಾಹೇಬ್ರು ಯಾವತ್ತೂ ಜಾತಿ ಅಂತಾ ಬೇಧ ಭಾವ ಮಾಡಲ್ಲ. ಯಾರೆ ಅವ್ರ ಬಳಿ ಹೋದ್ರೂ ಅಪ್ಯಾಯಮಾನವಾಗಿ ಆಲಂಗಿಸುವ, ಮಾನವೀಯ ಮೌಲ್ಯಗಳನ್ನು ಹೊಂದಿದ್ದಾರೆ. ಹೀಗಾಗಿ, ಮಾತಾಜಿಯವರಿಗೆ ಅವಹೇಳನ ಮಾಡಿದ್ದಾರೆ ಅನ್ನೋ ಮಾತು ಕೇಳಿ ಬಂದ ತಕ್ಷಣವೇ ನಾವೂ ಕೂಡ ಹೆಬ್ಬಾರ್ ಸಾಹೇಬ್ರಿಗೆ ಕೇಳಿದ್ದೇವೆ. ಆದ್ರೆ, ನಾನು ಹಾಗೇಲ್ಲ ಯಾವುದೇ ರೀತಿಯಲ್ಲಿ ಮಾತಾಡಿಲ್ಲ ಅಂತಾ ಶಿವರಾಮ್ ಹೆಬ್ಬಾರ್ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಮೇಲೆ ಆಣೆ ಮಾಡಿದ್ದಾರೆ ಅಂತಾ ಹೇಳಿದ್ರು. ಹೀಗಾಗಿ, ರಾಜಕೀಯವಾಗಿ ಈ ವಿಷಯವನ್ನು ಕೆಲವೊಬ್ರು ಬಳಸಿಕೊಂಡಿದ್ದು ತಪ್ಪು ಅಂದ್ರು. ಬಸವೇಶ್ವರಿ ಮಾತೆಯವರು ನಮಗೇಲ್ಲ ತಾಯಿಯ ಸ್ವರೂಪದಲ್ಲಿದ್ದಾರೆ. ನಾವೂ ಕೂಡ ಅವ್ರ ಭಕ್ತರೇ ಅಂತಾ ರವಿಗೌಡ ತಿಳಿಸಿದ್ರು.
ಇದು ಗುಡ್ಡಪ್ಪ ಕಾತೂರು ಮಾತು..!
ಹೆಬ್ಬಾರ್ ಸಾಹೇಬ್ರು ಅವರ 30-40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವತ್ತೂ ಧಾರ್ಮಿಕ ಮುಖಂಡರ ಬಗ್ಗೆ ಹಗುರವಾಗಿ ಮಾತನಾಡಿಲ್ಲ. ಯಾರೆಅವ್ರ ಮನೆ ಬಾಗಿಲಿಗೆ ಹೋದ್ರೂ ದಾನ ಧರ್ಮ ಮಾಡುವ ಮನಸ್ಥಿತಿಯವರು ಹೆಬ್ಬಾರ್.. ಆದ್ರೆ, ಹೆಬ್ಬಾರ್ ಸಾಹೇಬ್ರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ಇಡಲು ಕೆಲವ್ರು ರಾಜಕೀಯ ಮಾಡುತ್ತಿದ್ದಾರೆ ಅಂತಾ ವಕೀಲ ಗುಡ್ಡಪ್ಪ ಕಾತೂರು ಆಕ್ರೋಶ ಹೊರಹಾಕಿದ್ರು. ಮಾತಾಜಿಯವರನ್ನ ಇಂತಹ ವಿಷಯಗಳಲ್ಲಿ ಎಳೆದು ತಂದು, ಮುಂಡಗೋಡ ತಾಲೂಕಿನ ಧಾರ್ಮಿಕ ವಾತಾವರಣ ಕಲುಶಿತ ಮಾಡಬೇಡಿ ಅಂತಾ ಖಂಡಿಸಿದ್ರು. ಇನ್ನು, ಶಿವರಾಮ್ ಹೆಬ್ಬಾರ್ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಅಂತಾ ಗುಡ್ಡಪ್ಪ ತಿಳಿಸಿದ್ರು.
ಇನ್ನು, ಪತ್ರಿಕಾಗೋಷ್ಟಿಯಲ್ಲಿ ಭಾಗಿಯಾಗಿದ್ದ ಉಮೇಶ್ ಬಿಜಾಪುರ, ಮಹೇಶ್ ಹೊಸಕೊಪ್ಪ ಸೇರಿದಂತೆ ಹಲವರು ಮಾತನಾಡಿ, ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತೆಯವರ ಬಗ್ಗೆ ನಮಗೇಲ್ಲ ಅಪಾರ ಭಕ್ತಿ ಗೌರವ ಇದೆ. ನಾವೂ ಕೂಡ ಮಾತಾಜಿಯವರ ಭಕ್ತರಾಗಿದ್ದೇವೆ. ಸಚಿವ ಶಿವರಾಮ್ ಹೆಬ್ಬಾರ್ ಯಾವತ್ತೂ ಧಾರ್ಮಿಕಮುಖಂಡರಿಗೆ ಅವಹೇಳನಕಾರಿಯಾಗಿ ಮಾತನಾಡಿದ ಉಧಾಹರಣೆಗಳೇ ಇಲ್ಲ. ಹೀಗಾಗಿ, ಇಂತಹ ವಿಷಯಗಳನ್ನು ಇಟ್ಟುಕೊಂಡು ಸುಳ್ಳು ರಾಜಕೀಯ ಮಾಡಬೇಡಿ ಅಂತ ನೇರ ಎಚ್ಚರಿಕೆ ನೀಡಿದ್ರು.
ಅಂದಹಾಗೆ, ಮುಂಡಗೋಡಿನ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಾಲೂಕಿನ ಹಲವು ಬಿಜೆಪಿ ಮುಖಂಡರು ಭಾಗವಹಿಸಿದ್ದರು.