ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ್ದ ಶಿಕ್ಷಕ ಕುಸಿದು ಬಿದ್ದು ಸಾವು..!

ಹಾವೇರಿ: ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ್ದ ಶಿಕ್ಷಕ ಮೃತಪಟ್ಟ ಘಟನೆ ನಡೆದಿದೆ. ಏಕಾಏಕಿ
ಉಸಿರಾಟ ಸಮಸ್ಯೆಯಿಂದ ಕುಸಿದು ಬಿದ್ದು ಸಾವು ಕಂಡಿದ್ದಾರೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಮತ್ತಿಕೇರಿ ಗ್ರಾಮದ ಶಿಕ್ಷಕ ಸಂಗನಗೌಡರ (56) ಮೃತ ಶಿಕ್ಷಕರಾಗಿದ್ದಾರೆ.

ಹಾವೇರಿ ನಗರದ ಗೆಳೆಯರ ಬಳಗದ ಶಾಲೆಯಲ್ಲಿ ವಾಸ್ತವ್ಯ ಮಾಡಿದ್ದ ವೇಳೆ ಘಟನೆ ನಡೆದಿದೆ. ರಾತ್ರಿ ಊಟ ಮಾಡಿ ಮಲಗಿದ್ದ ವೇಳೆ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ತಕ್ಷಣ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾದ ಶಿಕ್ಷಕ ‌ಮೃತಪಟ್ಟಿದ್ದಾರೆ. ಹೀಗಾಗಿ, ನಿನ್ನೆ ರಾತ್ರಿಯೇ
ಮೃತದೇಹ ಸ್ವಗ್ರಾಮಕ್ಕೆ ರವಾನೆಯಾಗಿದೆ.
ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!