ಮುಂಡಗೋಡ ತಾಲೂಕಿನ ಬಾಚಣಕಿ ಜಲಾಶಯದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಸುಮಾರು 40-45ವರ್ಷ ವಯಸ್ಸಿನ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಂದು ಶವ ತೇಲುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ದುರ್ನಾತ..!
ಇನ್ನು, ಮಹಿಳೆ ಮೂರ್ನಾಲ್ಕು ದಿನದ ಹಿಂದೆಯೇ ಸಾವು ಕಂಡಿರೋ ಬಗ್ಗೆ ಅನುಮಾನ ವ್ಯಕ್ತವಾಗಿದ್ದು. ಸದ್ಯ ಶವ ಕೊಳೆತು ದುರ್ನಾತ ಬೀರುತ್ತಿದೆ. ಹೀಗಾಗಿ, ಸ್ಥಳಕ್ಕೆ ಬಂದ ಪೊಲೀಸರು ಶವ ಹೊರ ತೆಗೆಯಲು ಹರಸಾಹಸ ಪಡುವಂತಾಗಿದೆ.

ಆತ್ಮಹತ್ಯೆಯಾ..?
ಅಂದಹಾಗೆ, ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಡ್ಯಾಂ ನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರಾ..? ಅಥವಾ ಇನ್ಯಾವುದೋ ಬೇರೆ ಕಾರಣವಿದೆಯಾ ತಿಳಿದು ಬರಬೇಕಿದೆ. ಡ್ಯಾಂ ಅಂಗಳದಲ್ಲಿ ಮಹಿಳೆಯ ಪರ್ಸ ಪತ್ತೆಯಾಗಿದ್ದು ಅದ್ರಲ್ಲಿ ವಿವಿಧ ಬಗೆಯ ಮೆಡಿಸಿನ್, ಆಯಿಟ್ಮೆಂಟ್ ಗಳು, ಮಾತ್ರೆಗಳು ಸಿಕ್ಕಿವೆ. ಹೀಗಾಗಿ, ಈ ಮಹಿಳೆ ಅನಾರೋಗ್ಯದಿಂದ ಬಳಲಿ ಆತ್ಮಹತ್ಯೆ ಕೈಗೊಂಡ್ರಾ ಅನ್ನೋ ಅನುಮಾನ ಶುರುವಾಗಿದೆ.

ಅದ್ರ, ಜೊತೆ ಹುಬ್ಬಳ್ಳಿಯ ಜ್ಯವೇಲ್ಲರಿಯೊಂದರ ಅಡ್ರೆಸ್ ಇರೋ ಆಭರಣದ ಖಾಲಿ ಪ್ಯಾಕೇಟ್ ಲಭ್ಯವಾಗಿದ್ದು, ಮಹಿಳೆ ಹುಬ್ಬಳ್ಳಿ ಸಮೀಪದವರಾ ಅನ್ನೋ ಅನುಮಾನವೂ ಇದೆ. ಆದ್ರೆ, ಇದುವರೆಗೂ ಮಹಿಳೆ ಯಾರು..? ಎಲ್ಲಿಯವರು..? ಅನ್ನೋ ಖಚಿತ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರ ತನಿಖೆ ನಂತರವಷ್ಟೇ ಮಾಹಿತಿ ಹೊರಬರಬೇಕಿದೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯ ಗುರುತು ಸಿಕ್ಕವರು ಮುಂಡಗೋಡ ಪೊಲೀಸ್ ಠಾಣೆಯ ಈ ಕೆಳಗಿನ ನಂಬರ್ ಗಳಿಗೆ ಮಾಹಿತಿ ನೀಡಲು ಕೋರಲಾಗಿದೆ.
9480805258
9480805275

error: Content is protected !!