ವಿಜಯಪುರ: ಇದು ಅಕ್ಷರಶಃ ಆನಲೈನ್ ನಲ್ಲೇ ಹುಟ್ಟಿ ಆನಲೈನ್ ನಲ್ಲೇ ಮುಗಿದು ಹೋದ ಮೋಸದ ಪ್ರೀತಿ. ಜೊತೆ ಉಂಡೂ ಹೋಗಿ ಕೊಂಡೂ ಹೋದ ಮಹಾಮೋಸದ ಸ್ಟೋರಿ. ಅಂದಹಾಗೆ ಇದು ನಡೆದದ್ದು ವಿಜಯಪುರ ಜಿಲ್ಲೆಯಲ್ಲಿ. ಅವಳು ಆತನಿಗೆ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದ ಮಾಯಾಂಗನೆ..! ಮೋಸ ಮಾಡಲೇಂದೇ ಫೇಸ್ ಬುಕ್ ಆರಿಸಿಕೊಂಡಿದ್ದ ಐನಾತಿ ಮಹಿಳೆ.
ಡಿಪಿ ಲುಕ್ಕು..!
ಅಸಲು, ಅವಳ ಫೇಸ್ ಬುಕ್ ಪೊಟೋ ನೋಡಿದ್ರೆ ಎಂತವರಿಗೂ ಒಂದುಕ್ಷಣ ದಿಗಿಲಾಗತ್ತೆ. ಅಂತಹ ಮಾದಕತೆಯ ನೋಟ. ಹೀಗಾಗಿ, ಆ ಅಕೌಂಟಿನಿಂದ ಪ್ರೆಂಡ್ ರಿಕ್ವೆಸ್ಟ್ ಬಂದ್ರೆ ಸಾಕು ಕ್ಷಣಮಾತ್ರದಲ್ಲೇ ಅಕ್ಸೆಪ್ಟು ಮಾಡಿಕೊಳ್ಳುವ ಆಸೆ ಹುಟ್ಟೇ ಬಿಟ್ಟಿರತ್ತೆ. ಅಂತಹದ್ದೊಂದು ಮಾಯಾಜಾಲ ಹೆಣೆದಿದ್ದ ಆ ಲೇಡಿ ಅನಾಮತ್ತಾಗಿ ಲಕ್ಷ ಲಕ್ಷ ಹಣ ಎಗರಿಸಿದ್ದಾಳೆ. ಹಾಗೆ ಆತನ ಬಲೆಗೆ ಬಿದ್ದಿದ್ದ ಅಬನೊಬ್ಬ ಆಕೆಯ ಡಿಪಿ ಪೋಟೊ ನೋಡಿ ಕ್ಲೀನ್ ಬೋಲ್ಡ್ ಆಗಿದ್ದ. ಪ್ರೆಂಡ್ ರಿಕ್ವೆಸ್ಟ್ ಕಳಿಸಿದ ತಕ್ಷಣವೇ ಅಕ್ಸೆಪ್ಟು ಮಾಡಿಕೊಙಡಿದ್ದ. ಅವಳೊಂದಿಗೆ ಮುಂದೆ ಚಾಟಿಂಗ್ ಮಾಡಲೂ ಆರಂಭಿಸಿದ್ದ.. ಸ್ನೇಹ, ಪ್ರೀತಿ ಅಂತೇಲ್ಲ ಶುರುವಾದ ಇವ್ರಿಬ್ಬರ ಫೇಸ್ ಬುಕ್ ಆಟ, ಕಡೆ ಕಡೆಗೆ ಮದುವೆ ಹಂತಕ್ಕೂ ಬಂದಾಗಿತ್ತು.. ಆದ್ರೆ ಮುಂದೆ ಮಾತ್ರ ನಡೆದದ್ದೇ ಘನಘೋರ ನಾಮಾವಳಿ..!
ಶುರುವಾಯ್ತು ಎತ್ತುವಳಿ..!
ಅಂದಹಾಗೆ, ಫೇಸ್ ಬುಕ್ ಪ್ರಣಯದ ನಡುವೆ ಮಾದಕ ನೋಟದ ಚೆಲುವೆ ಹೊಸ ಹೊಸ ವರಾತಗಳನ್ನು ಶುರುವಿಟ್ಟಿದ್ದಳು. ತಾನು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ ಹಣದ ಅವಶ್ಯಕತೆ ಇದೆ ಮುಂದೆ ನಾನು ಡಿಸಿ ಆಗುವೆ ಎಂದೇಲ್ಲ ಪುಂಗಿ ಊದೋಕೆ ಶುರು ಮಾಡಿದ್ದಳು. ಹಾಗೆ ನಾನು ಡಿಸಿ ಆಗಬೇಕು ಅಂದ್ರೆ ಬರೊಬ್ಬರಿ 40 ಲಕ್ಷದಷ್ಟು ಹಣ ಬೇಕಾಗುತ್ತದೆ ಅಂತೇಲ್ಲ ಹೇಳಿ ಪಾಪ ಬಡಪಾಯಿ ಹುಡುಗನಿ.ಮದ ಅನಾಮತ್ತಾಗಿ ಏನಿಲ್ಲವೆಂದ್ರೂ 40 ಲಕ್ಷ ರೂ. ಹಣ ಎತ್ತುವಳಿ ಮಾಡಿದ್ದಾಳೆ.
ಬೆತ್ತಲೆ ವಿಡಿಯೋ, ಬ್ಲ್ಯಾಕ್ ಮೇಲ್..!
ಯಾವಾಗ, ಆ ಯುವಕನಿಂದ ಹಣದ ಬಾಬತ್ತು ಹರಿದು ಬರೋಕೆ ಶುರುವಾಯ್ತೊ ಆಗಿಂದಲೇ ಈಕೆ ಒಂದಿಷ್ಟು ಹೊಸ ಹೊಸ ಐಡಿಯಾಗಳ ಮೂಲಕ ಹಣ ಎತ್ತುವ ದಂಧೆಗೆ ಇಳಿದು ಬಿಟ್ಟಳು. ವಿಡಿಯೊ ಕಾಲ್ ಮಾಡಿ, ಪೋನ್ ಸೆಕ್ಸ್ ಮಾಡುತ್ತ ಆತನ ಬೆತ್ತಲೆ ವಿಡಿಯೊ, ವಿಡಿಯೋ ರೆಕಾರ್ಡ್ ಮಾಡಿಕೊಂಡಳು. ನಂತರ ಮತ್ತಷ್ಟು ಹಣಕ್ಕಾಗಿ ವಿಡಿಯೊ ತೋರಿಸಿ ಬ್ಲ್ಯಾಕ್ ಮೇಲ್ ಮಾಡೋಕೆ ಶುರುವಿಟ್ಲು. ಹೀಗಾಗಿ, ಮಾಯಾಂಗನೆಯ ಮೋಸದಾಟ ಅರಿತ ಯುವಕ ನೇರವಾಗಿ ಪೋಲಿಸ್ ಠಾಣೆ ಮೆಟ್ಟಿಲೇರಿದ ಪರಿಣಾಮ ಬೆಳದಿಂಗಳ ಬಾಲೆ ಸದ್ಯ ಅಂದರ್ ಆಗಿದ್ದಾಳೆ. ವಿಪರ್ಯಾಸ ಅಂದ್ರೆ, ಇವಳ ಇಷ್ಟೆಲ್ಲ ಆಟಕ್ಕೆ ಸಪೋರ್ಟ ಮಾಡಿದ್ದು ಸ್ವತಃ ಆಕೆಯ ಗಂಡ ಎಂಬುದು ವಿಶೇಷ.
ಹೌದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರು ಗ್ರಾಮದ ಯುವಕ ಪರಶುರಾಮನ ಕತೆಯಿದು. ಈತ ಹೈದ್ರಾಬಾದ್ ನಲ್ಲಿ ಕಟ್ಟಡ ಕಾರ್ಮಿಕರ ಸೂಪರ್ ವೈಸರ್ ಆಗಿದ್ದಾನೆ. ಅವನಿಗೆ 30 ಸಾವಿರ ಸಂಬಳ ಬರುತ್ತಿತ್ತು. ಆತ ಮನಸಾರೆ ಪ್ರೀತಿಸುತ್ತಿದ್ದ ಹುಡುಗಿ ಕೇಂದ್ರ ಸರಕಾರದ ಪರೀಕ್ಷೆಗೆ ತಯಾರಿ ನಡೆಸಿದ್ದರಿಂದ ಡಿಸಿ ಆಗುತ್ತಾಳೆ ಎನ್ನುವ ಕನಸು ಕಂಡಿದ್ದ. ಆದರೆ ಆ ಕನಸು ಬಹುದೊಡ್ಡ ದೋಖಾ ತಂದೊಡ್ಡಿದೆ. ಆನ್ಲೈನ್ ನಲ್ಲಿ ಪರಿಚಯವಾಗಿದ್ದ ಹಾಸನ ಮೂಲದ ಹುಡುಗಿಯನ್ನು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರು ಗ್ರಾಮದ ಯುವಕ ಪರಶುರಾಮ ನಡುವೆ ಸಲುಗೆ ಬೆಳೆದಿತ್ತು. ಈ ಸಲುಗೆ ಪ್ರೀತಿಗೆ ತಿರುಗಿತ್ತು. ಇಬ್ಬರೂ ಒಬ್ಬರನೊಬ್ಬರು ನೋಡದೆಯೇ ಮನಸಾರೆ ಪ್ರೀತಿಸುತ್ತಿದ್ದರು. ಅವಳ ಫೇಸ್ ಬುಕ್ ಡಿಪಿ ನೋಡಿ ಮಾರುಹೋಗಿದ್ದ ಅವಳ ಓದಿಗಾಗಿ ಮನೆಯಲ್ಲಿ ಕೂಡಿಟ್ಟಿದ್ದ 5 ಲಕ್ಷ ನಗದು ಹಣ, ಒಂದು ಪ್ಲಾಟ್ ಸೇರಿದಂತೆ ಅವಳ ಓದಿಗಾಗಿ ಎಲ್ಲವನ್ನು ಮಾರಿ ಹಣ ಕಳಿಸುತ್ತಿದ್ದ. ಆದರೆ ಸುಮಾರು 40ಲಕ್ಷ ದಷ್ಟು ಹಣ ಕಳಿಸಿದರೂ ಅವಳಿಗೆ ಆತ ಬೇಟಿ ಆಗಿರಲಿಲ್ಲ, ಮತ್ತೆ ಹಣ ಕೇಳಲು ಮುಂದಾದ ಆಕೆ ಈತ ಸ್ನಾನ ಮಾಡುವ ಸಂದರ್ಭದಲ್ಲಿ ವಿಡಿಯೋ ಕಾಲ್ ಮಾಡಿ ಅದನ್ನು ರಿಕಾರ್ಡ ಮಾಡಿಕೊಂಡು ಮತ್ತೆ ಹಣಕ್ಕೆ ಆ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೆಲ್ ಮಾಡಲು ಮುಂದಾದಳು. ಇದರಿಂದ ರೋಸಿ ಹೋದ ಯುವಕ ತನಗೆ ಆಗಿರುವ ಮೋಸದ ಕುರಿತು ದಿನಾಂಕ 15.11.2022 ರಂದು ಸಿಂದಗಿ ಠಾಣೆಯಲ್ಲಿ ದೂರು ನೀಡಿದ್ದ.
ಆಕೆ ಮಂಜುಳೆ..!
ಅಂದಹಾಗೆ, ಮೋಸ ಹೋದ ಯುವಕ ನೀಡಿರುವ ದೂರಿನ ಪ್ರಕಾರ, ಜೂನ್ ತಿಂಗಳ 29 ರಂದು ಈ ಯುವಕನಿಗೆ, Manjula K.R ಎಂಬ ಪೇಸ್ ಬುಕ್ ಐಡಿಯಿಂದ ಪ್ರೆಂಡ್ ರಿಕ್ವೆಸ್ಟ್ ಬಂದಿರುತ್ತೆ. ಆಗ ಈ ಯುವಕ ರಿಕ್ವೆಸ್ಟ್ ಅನ್ನು Confirm ಮಾಡುತ್ತಾನೆ. ನಂತರ ಮೆಸೆಂಜರ್ ನಲ್ಲಿ Hi ಅಂತಾ ಮೆಸೇಜ್ ಮಾಡಿ, ಇಬ್ಬರ ನಡುವೆ ಫೇಸ್ ಬುಕ್ ಮೂಲಕ ಸಂಪರ್ಕ್ ಬೆಳೆಯುತ್ತದೆ. ಇದನ್ನೇ ಉಪಯೋಗಿಸಿಕೊಂಡ ಆ ಯುವತಿ, ನಮ್ಮ ತಾಯಿಗೆ ಆರೋಗ್ಯ ಸರಿ ಇಲ್ಲ, ಅದಕ್ಕೆ 700/- ರೂ ಫೋನ್ ಪೇ ಮಾಡಿ ಅಂತಾ ಮನವಿ ಮಾಡುತ್ತಾಳೆ. ಇದಕ್ಕೆ ಕರಗಿದ ಆತನ ಹೃದಯ ಫೋನ್ ಪೇ ಮಾಡುವಂತೆ ಮಾಡುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಆ ಮಹಿಳೆ ಪದೇ ಪದೇ ಫೋನ್ ಪೇ ಮಾಡಿ, ಯುಪಿಎಸ್ಸಿ ಪರೀಕ್ಷೆ ಬರೆಯುತ್ತಿದ್ದು ಹಣ ನೀಡುವಂತೆ ಕೇಳುತ್ತಿರುತ್ತಾಳೆ. ಅದನ್ನೇ ನಂಬಿದ ಈ ಯುವಕ ಇಲ್ಲಿಯವರೆಗೆ ಸುಮಾರು 40 ಲಕ್ಷಕ್ಕೂ ಅಧಿಕ ಹಣ ಅವಳಿಗೆ ಕಳಿಸಿದ್ದಾನೆ.
ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ ಪಿ ಆನಂದಕುಮಾರ ವಿಶೇಷ ತಂಡವೊಂದನ್ನು ರಚಿಸಿ ಆರೋಪಿ ಮಂಜುಳಾಳನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ದಾಸರಳ್ಳಿ ಗ್ರಾಮದಿಂದ ಕರೆ ತಂದಿದ್ದಾರೆ. ಪೋಲಿಸರು ಬಂದ ಮಾಹಿತಿ ತಿಳಿದ ಮಂಜುಳಾ ಗಂಡ ಎಸ್ಕೇಪ್ ಆಗಿದ್ದಾನೆ. ಇನ್ನೂ ಈ ಮಂಜುಳಾಗೆ ಮಕ್ಕಳು ಸಹ ಇವೆ, ಇವಳು ತಾನು ಫೇಸ್ ಬುಕ್ ನಲ್ಲಿ ಹಾಕಿದ ಪೊಟೋ ಬೆರೇನೇ ಇದೆ ಇವಳ ನಿಜವಾದ ಪೊಟೋ ಬೆರೆಯೇ ಇದೆ. ಹೀಗೆ ಅಂದವಾದ ಮಾಡಲ್ ಗಳ ಪೊಟೋ ಹಾಕಿಕೊಂಡು ಈ ಯುವಕನಿಗೆ ಈಕೆ ವಂಚಿಸಿ ಪೋಲಿಸರ ಅತಿಥಿಯಾಗಿದ್ದಾಳೆ. ಇದೇ ರೀತಿ ಬೇರೆ ಯಾರಿಗಾದರು ವಂಚಿಸಿದ್ದಾಳಾ ಎಂಬುದರ ಕುರಿತು ಪೋಲಿಸರ ತನಿಖೆ ಆರಂಭಿಸಿದ್ದಾರೆ ಪೊಲೀಸ್ರು.
ಕಾರ್ ಖರೀದಿಸಿದ್ಲು..!
ಇನ್ನೂ ವಂಚಿಸಿ ಪಡೆದ ಹಣದಲ್ಲಿ ಮಂಜುಳಾ 100 ಗ್ರಾಂ ಬಂಗಾರ, ಒಂದು ಹುಂಡೈ ಕಾರ್, ಬೈಕ್ ಖರೀದಿ ಮಾಡಿದ್ದಾಳೆ, ಜೊತೆಗೆ ಊರಲ್ಲಿ ಮನೆಯನ್ನು ಕೂಡಾ ಕಟ್ಟುತ್ತಿದ್ದಾಳೆ. ಇನ್ನೂ ಮಂಜುಳಾ ಈ ಮೋಸದಾಟಕ್ಕೆ ಸಂಪೂರ್ಣವಾಗಿ ಬೆಂಬಲವಾಗಿ ನಿಂತಿದ್ದು ಈಕೆಯ ಗಂಡ, ಸದ್ಯ ಆತ ಕೂಡಾ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ. ಅವಳ ಮುಖವನ್ನೇ ನೋಡದೇ ಲಕ್ಷಾಂತರ ಹಣ ಹಾಕಿದ ಯುವಕ ಈಗ ತಲೆಯ ಮೇಲೆ ಕೈ ಇಟ್ಟು ಕುಳಿತುಕೊಳ್ಳುವಂತಾಗಿದೆ. ಇನ್ನು ಮುಂದೆಯಾದರೂ ಯಾರೂ ಈ ರೀತಿಯಲ್ಲಿ ಮೋಸಕ್ಕೆ ಒಳಗಾಗಬೇಡಿ ಎಂಬುದು ಎಸ್ಪಿ ಅವರ ಮಾತು. ಪ್ರಕರಣ ಬೇಧಿಸಿದ ಪೋಲಿಸರ ತಂಡಕ್ಕೆ ಎಸ್ ಪಿ ಆನಂದಕುಮಾರ ಪ್ರಶಂಸನಾ ಪತ್ರ ನೀಡುವದರ ಜೊತೆಗೆ ಅಭಿನಂದನೆ ಸಲ್ಲಿಸಿದ್ದಾರೆ.